ಮೇಕೆದಾಟು ಯೋಜನೆ ಶಂಕುಸ್ಥಾಪನೆಗೆ 1 ತಿಂಗಳ ಗಡುವು ನೀಡಿದ ಕಾಂಗ್ರೆಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.4- ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ ನೇರವೇರಿಸಲು ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಗಡವು ನೀಡುತ್ತಿದ್ದೇವೆ. ಅಷ್ಟರಲ್ಲಿ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳದೆ ಇದ್ದರೆ ಕಾಂಗ್ರೆಸ್ ಉಗ್ರ ಸ್ವರೂಪದ ಪ್ರತಿಭಟನೆಗೆ ಮುಂದಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿಂದು ನಡೆಸಿದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಐದು ವರ್ಷ ಕೆಲಸ ಮಾಡಿದ್ದರು. ಅವರಿಗೆ ಎಲ್ಲಾ ಕಾನೂನುಗಳು ತಿಳಿದಿವೆ. ಮೇಕೆದಾಟ ಯೋಜನೆಗೆ ಅಡ್ಡಿ ಪಡಿಸಲು ತಮಿಳುನಾಡಿಗೆ ಹಕ್ಕಿಲ್ಲ ಎಂದು ಮುಖ್ಯಮಂತ್ರಿಯೇ ಹೇಳಿಕೆ ನೀಡಿದ್ದಾರೆ. ಆಗಿದ್ದ ಮೇಲೆ ಯೋಜನೆ ಆರಂಭಿಸಲು ಏನು ತೊಂದರೆ ಇದೆ, ವಿಳಂಬ ಏಕೆ ಎಂದು ಪ್ರಶ್ನಿಸಿದರು.

ಮೇಕೆದಾಟು ಯೋಜನೆಯಲ್ಲಿ ತಮಿಳುನಾಡಿನ ಹಣವಿಲ್ಲ, ಭೂಮಿ ಇಲ್ಲ, ನೀರಿನ ಹಂಚಿಕೆ ಅಧಿಕಾರವೂ ಕೇಂದ್ರ ಸರ್ಕಾರದ ಬಳಿ ಇದೆ. ತಮಿಳುನಾಡಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಆದರೂ ಕರ್ನಾಟಕ ಸರ್ಕಾರ ಯೋಜನೆ ಆರಂಭಿಸದೆ ವಿಳಂಬ ಮಾಡುತ್ತಿರುವುದೇಕೆ. ಕೇಂದ್ರ ಮತ್ತು ರಾಜ್ಯ ಎರಡು ಕಡೆ ಬಿಜೆಪಿಯೇ ಅಧಿಕಾರದಲ್ಲಿದೆ, ಡಬಲ್ ಇಂಜಿನ್ ಸರ್ಕಾರ ಇದ್ದರೂ ಯೋಜನೆ ಯಾಕೆ ಆರಂಭಗೊಳ್ಳುತ್ತಿಲ್ಲ. ಇದರಲ್ಲಿ ಯಾರೊಂದಿಗಾದರೂ ಒಳ ಒಪ್ಪಂದ ಇದ್ಯಾ. ಇದ್ದರೆ ಯಾವ ರೀತಿಯ ಒಪ್ಪಂದ ಇದೆ ಎಂದು ಎಂದು ಅನುಮಾನ ವ್ಯಕ್ತ ಪಡಿಸಿದರು.

ಈಗ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಇದೆ. ಅದಕ್ಕಾಗಿ ಮುಖ್ಯಮಂತ್ರಿಗೆ ಒಂದು ತಿಂಗಳು ಗಡವು ನೀಡುತ್ತೇವೆ. ನೀರಾವರಿ ವಿಷಯದಲ್ಲಿ ವಿಳಂಬ ಮಾಡಬಾರದು. ಮೇಕೆದಾಟು ಕೇವಲ ರೈತರ ಬೇಡಿಕೆ ಅಲ್ಲ. ಬೆಂಗಳೂರಿನ 28 ವಿಧಾನಸಭಾಕ್ಷೇತ್ರಗಳಿಗೂ ನೀರು ಪೂರೈಸುವ ಯೋಜನೆ. ಅದರ ಜಾರಿಗೆ ಒತ್ತಾಯಿಸಿ ರೈತರು ಪ್ರತಿಭಟನೆ ಮತ್ತು ಪಾದಯಾತ್ರೆ ನಡೆಸುತ್ತಿದ್ದರೆ ಅವರನ್ನು ಅಪರಾಗಳಂತೆ ಬಂಸಲಾಗಿದೆ. ಮಾಹಿತಿ ನೀಡಿಯೇ ಪಾದಯಾತ್ರೆ ಮಾಡುತ್ತಿದ್ದ ರೈತರನ್ನು ಸರ್ಕಾರ ಬಂಸಿದ್ದೇಕೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಈ ಸರ್ಕಾರಕ್ಕೆ ನೀರಾವರಿ ವಿಷಯದಲ್ಲಿ ಬದ್ಧತೆ ಇಲ್ಲ. ಮಹದಾಯಿ ವಿಚಾರದಲ್ಲೂ ಗೋವಾ ಸರ್ಕಾರ ಅಡ್ಡಿ ಪಡಿಸುತ್ತಿದೆ. ಅವಕಾಶವೇ ಇಲ್ಲದಿದ್ದರೂ ಸಣ್ಣ ತರಕಾರರನ್ನು ಮುಂದಿಟ್ಟು ಕೊಂಡು ತಗಾದೆ ತೆಗೆದಿದೆ. ಅದನ್ನು ಬಗೆ ಹರಿಸಿ ಯೋಜನೆ ಆರಂಭಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಲೇವಡಿ ಮಾಡಿದರು.

ಒಂದು ತಿಂಗಳಲ್ಲಿ ಮೇಕೆದಾಟು ಯೋಜನೆಗೆ ಶಂಕು ಸ್ಥಾಪನೆ ಮಾಡಬೇಕು. ಮಾಡದೇ ಇದ್ದರೆ ಆಗ ಯಾವ ರೀತಿಯ ಹೋರಾಟ ಮಾಡಬೇಕು ಎಂದು ಚರ್ಚಿಸಿ ಅದರಂತೆ ಪಕ್ಷ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಮಳೆ ನೀರು ಹರಿದು ಜನಸಾಮಾನ್ಯರು ತೊಂದರೆ ಒಳಗಾಗಿರುವ ವಿಷಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್ ಅವರು, ರಾಜ್ಯದಲ್ಲಿ ಸರ್ಕಾರವೇ ಇಲ್ಲವಾಗಿದೆ. ಹೇಳುವವರಿಲ್ಲ, ಕೇಳುವವರಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಇತ್ತೀಚೆಗೆ ಸರ್ಕಾರದ ಕಾರ್ಯಕ್ರಮವನ್ನು ಬಿಜೆಪಿ ಪಕ್ಷದ ಕಾರ್ಯಕ್ರಮ ಎಂಬಂತೆ ನಡೆಸಿದ್ದಾರೆ. ಸರ್ಕಾರದ ಕಾರ್ಯಕ್ರಮಕ್ಕೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಏನು ಸಂಬಂಧ. ಕಾರ್ಯಕ್ರಮದ ಸ್ವಾಗತ ಕಮಾನಿನಲ್ಲಿ ಜೆ.ಪಿ.ನಡ್ಡಾ ಅವರ ಫೆÇೀಟೋ ಯಾಕೆ ಹಾಕಿದ್ದಾರೆ ಎಂದು ಪ್ರಶ್ನಿಸಿದರು. ಐಎಎಸ್, ಐಪಿಎಸ್ ಅಕಾರಿಗಳಿಗೆ ಸ್ವಲ್ಪ ಬುದ್ದಿ ಇದೆ ಎಂದು ತಿಳಿದುಕೊಂಡಿದ್ದೇವು. ಆದರೆ ಅವರೇ ಶಿಷ್ಠಾಚಾರ ಉಲ್ಲಂಘಿಸಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇವೆ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂ ಅವರನ್ನು ಬಂಸಿದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಡಿ.ಕೆ.ಶಿವಕುಮಾರ್ ಅವರು, ಇದು ನೀಚ ರಾವಣ ಸರ್ಕಾರ, ಹೆಣ್ಣುಮಗಳನ್ನು ಎಳೆದು ಹಾಕಲು ಇವರಿಗೆ ಅಕಾರ ಕೊಟ್ಟವರು ಯಾರು ಎಂದು ಕಿಡಿಕಾರಿದರು.

ನಮ್ಮ ದೇಶ ಎತ್ತ ಸಾಗುತ್ತಿದೆ ಅರ್ಥವಾಗುತ್ತಿಲ್ಲ. ಅನ್ನದಾತನಿಗೆ ರಕ್ಷಣೆಯಿಲ್ಲದಂತಾಗಿದೆ. ರೈತ ಹೋರಾಟಗಾರರನ್ನು ಹತ್ಯೆಮಾಡಲಾಗಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಬೆಂಗಾವಲು ಪಡೆಯ ಕಾರನ್ನು ರೈತರ ಮೇಲೆ ಹರಿಸಿ ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಒಟ್ಟು ಎಂಟು ಮಂದಿ ಸಾವೀಗೀಡಾಗಿದ್ದಾರೆ. ಇದು ನಾಲ್ವರು ರೈತರ ಕೊಲೆ ವಿಷಯವಲ್ಲ. ಇಡೀ ರೈತ ಸಮುದಾಯದ ಕಗ್ಗೋಲೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ರೈತರ ಹತ್ಯೆಯ ನೈತಿಕ ಹೊಣೆ ಹೊತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗೃಹ ಸಚಿವರು ರಾಜೀನಾಮೆ ನೀಡಬೇಕಿತ್ತು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂ ಅವರನ್ನು ಮಧ್ಯ ರಾತ್ರಿ ಎಳೆದಾಡಿದ್ದಾರೆ. ಪ್ರಿಯಾಂಕರ ಮೇಲೆ ಪುರುಷ ಪೊಲೀಸರು ಕೈ ಹಾಕಿದ್ದಾರೆ. ಯಾವ ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆ. ಇದೇನಾ ಬಿಜೆಪಿ ಸಂಸ್ಕøತಿ, ಪ್ರಿಯಾಂಕ ಅವರ ಮೇಲೆ ಯಾವುದಾದರೂ ವಾರೆಂಟ್ ಇತ್ತಾ. ಯಾವ ಕಾರಣಕ್ಕೆ ಮಧ್ಯರಾತ್ರಿ ಬಂಸಲಾಗಿದೆ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ವಿರೋಸಿ ಕಳೆದ 10 ತಿಂಗಳಿಂದ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಸಮಸ್ಯೆ ಆಲಿಸಲ ಪ್ರಧಾನಮಂತ್ರಿ ಸೇರಿದಂತೆ ಯಾವೊಬ್ಬ ಬಿಜೆಪಿ ನಾಯಕರು ಹೋಗಿಲ್ಲ. ಬದಲಾಗಿ ಹಿಂಸಾಚಾರ ನಡೆಸುತ್ತಿದ್ದಾರೆ. ಇದು ಪ್ರಜÁಪ್ರಭುತ್ವ ವ್ಯವಸ್ಥೆಯೇ ಎಂದರು.

ಕೇಂದ್ರ ಸರ್ಕಾರ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಷರು ಈ ರೀತಿ ಹಿಂಸಾಚಾರ ನಡೆಸುತ್ತಿರಲಿಲ್ಲ. ಪ್ರತಿಭಟನೆಗಳಿಗೆ ಗೌರವ ನೀಡುತ್ತಿದ್ದರು. ಕೊನೆಗೆ ಪ್ರತಿಭಟನೆಗೆ ಹೆದರಿ ದೇಶ ಬಿಟ್ಟು ಹೋದರು. ಬಿಜೆಪಿ ಸರ್ಕಾರ ಬ್ರಿಟಿಷರಿಗಿಂತ ಹೀನಾಯವಾಗಿ ನಡೆದುಕೊಳ್ಳುತ್ತಿದೆ, ಇದನ್ನು ವಿರೋಸಿ ಮತದಾರರೇ ದಂಗೆ ಏಳುವ ಪರಿಸ್ಥಿತಿ ಉದ್ಬವಿಸಿದೆ. ಪ್ರಸ್ತುತ ದೇಶದಲ್ಲಿ ಅರಾಜಕತೆ ಇದೆ. ಇದರ ವಿರುದ್ದ ಕಾಂಗ್ರೆಸ್ ನಾಯಕಿಯರಾದ ಸೋನಿಯಾ ಗಾಂ ಮತ್ತು ಪ್ರಿಯಾಂಕ ಗಾಂ ಅವರು ಹೆದರದೆ ಹೋರಾಟ ನಡೆಸಬೇಕು. ಇಡೀ ದೇಶ ಅವರ ಬೆನ್ನಿಗಿದೆ ಎಮದು ಹೇಳಿದರು.

ಕೇಂದ್ರ ಸರ್ಕಾರ ಇನ್ನಾದರೂ ಪಾಠ ಕಲಿತು ಪ್ರಜಾಪ್ರಭುತ್ವಕ್ಕೆ ಗೌರವ ನೀಡುತ್ತಾರೆ ಎಂಬ ನಂಬಿಕೆ ಇಲ್ಲ. ಜನರೇ ಈ ಸರ್ಕಾರಗಳನ್ನು ಕಿತ್ತೋಗೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಹಿರಿಯ ನಾಯಕರಾದ ಬಿ.ಕೆ.ಹರಿಪ್ರಸಾದ್, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ದೃವನಾರಾಯಣ್, ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Facebook Comments