ಗಡ್ಡಧಾರಿ ಪುರುಷರಿಗೆ ಶಾಕ್ ನೀಡಿದೆ ಈ ವರದಿ..!

ಈ ಸುದ್ದಿಯನ್ನು ಶೇರ್ ಮಾಡಿ

ವಿಭಿನ್ನವಾಗಿ ಕಾಣಲು ತುಂಬಾ ಜನ ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಫ್ಯಾಶನ್‌ಗಾಗಿ ಗಡ್ಡ ಬೆಳೆಸುವವರ ಸಂಖ್ಯೆ ಹೆಚ್ಚಿದೆ. ಅದಕ್ಕೆ ಹಲವು ಮಂದಿ ವಿಭಿನ್ನ ಶೈಲಿಯ ಹೆರ್‌ಸ್ಟ್ರೈಲ್, ಗಡ್ಡ ಬೆಳೆಸುವುದನ್ನು ಇಷ್ಟು ಪಡುತ್ತಾರೆ. ಇದೀಗ ಗಡ್ಡದಲ್ಲೂ ಹಲವು ಫ್ಯಾಶನ್‌ಗಳು ಬಂದಿವೆ. ಆದ್ರೆ ನಿಮ್ಗೆ ಗೊತ್ತಾ! ಗಡ್ಡ ಬಿಟ್ಟ ಪುರುಷರಿಗಿಂತ ನಾಯಿಗಳು ಹೆಚ್ಚು ಕ್ಲೀನ್‌ಅಂತೆ!

ಹೌದು…. ಪುರುಷರ ಗಡ್ಡದಲ್ಲಿ ನಾಯಿ ಮೈಮೇಲೆ ಇರೋದಕ್ಕಿಂತ ಹೆಚ್ಚು ಕೀಟಾಣುಗಳು ಇರುತ್ತಂತೆ! ಇದನ್ನು ನಾವು ಹೇಳ್ತಾ ಇಲ್ಲ. ಸ್ವಿಟ್ಜರ್ಲೆಂಡ್‌ನ ಹಿರ್ಸ್‌ಲ್ಯಾಂಡೆನ್‌ಕ್ಲಿನಿಕ್‌ನ ಪ್ರೊಫೆಸರ್‌ಗಳು ನಡೆಸಿರುವ ಅಧ್ಯಯನದ ಪ್ರಕಾರ ನಾಯಿಯ ತುಪ್ಪಳಕ್ಕಿಂತ ಪುರುಷರ ಗಡ್ಡದಲ್ಲಿ ಹೆಚ್ಚು ಬ್ಯಾಕ್ಟೀರಿಯಾದಂತಹ ಸೂಕ್ಷ್ಮಜೀವಿಗಳು ಇರಬಹುದು ಎಂದು ತಿಳಿದುಬಂದಿದೆ.

18 ಪುರುಷರ ಮುಖದಲ್ಲಿನ ಕೂದಲು ಹಾಗೂ 30 ವಿವಿಧ ತಳಿಯ ಶ್ವಾನಗಳ ಕತ್ತಿನ ಸ್ವ್ಯಾಬ್‌ಪರೀಕ್ಷೆಯನ್ನು ಸಂಶೋಧಕರು ನಡೆಸಿದ್ದಾರೆ.  ಈ ಸಂಬಂಧ ಪ್ರೊಫೆಸರ್ ಆ್ಯಂಡ್ರಿಯಾಸ್ ಗಟ್ಜೆಟ್‌, ”ಪುರುಷರ ಗಡ್ಡದಲ್ಲಿ ನಾಯಿಗಳ ತುಪ್ಪಳಕ್ಕಿಂತ ಹೆಚ್ಚು ಬ್ಯಾಕ್ಟೀರಿಯಾಗಳು ಕಂಡುಬಂದಿವೆ” ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.

ಈ ಅಧ್ಯಯನಗಳ ಆಧಾರದ ಮೇಲೆ ಗಡ್ಡಧಾರಿ ಪುರುಷರಿಗಿಂತ ಶ್ವಾನಗಳೇ ಶುಚಿಯಾಗಿರುತ್ತವೆ ಎನ್ನಬಹುದು”ಎಂದು  ಗಟ್ಜೆಟ್‌ಹೇಳಿದ್ದಾರೆ.

ಗಡ್ಡವನ್ನು ಕ್ಲೀನ್ ಆಗಿಟ್ಟುಕೊಳ್ಳಲು ಏನು ಮಾಡಬೇಕು? 

– ಗಡ್ಡ ಬಿಡಲು ಆರಂಭಿಸಿದಾಗ ತುರಿಕೆ ಆರಂಭವಾಗುತ್ತದೆ. ಆದುದರಿಂದ ಮೊದಲಿನಿಂದಲೇ ಗಡ್ಡವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಆರಂಭಿಸಿ.
– ಗಡ್ಡ ಸಣ್ಣದಿರುವಾಗ  ಕತ್ತರಿಸಬೇಡಿ. ಸ್ವಲ್ಪ ಉದ್ದ ಬಿಡಿ. ಎರಡು ಮೂರು ತಿಂಗಳು ಕಳೆದ ಮೇಲೆ ಕತ್ತರಿಸಿ.
– ಗಡ್ಡವನ್ನು ಸ್ವಚ್ಛಗೊಳಿಸಲು ಶ್ಯಾ0ಪೂ ಬಳಸಿ. ನಿಮ್ಮಕೂದಲನ್ನು ನಿಯಮಿತವಾಗಿ ತೊಳೆದು ಸ್ವಚ್ಛಗೊಳಿಸಿಕೊಳ್ಳುವ0ತೆ, ನಿಮ್ಮ ಮುಖದ ಮೇಲಿನ ಕೂದಲನ್ನೂ ನಿಯಮಿತವಾಗಿಸ್ವಚ್ಛಗೊಳಿಸಿ.
– ಗಡ್ಡ ತೊಳೆಯಲು ಸಾಬೂನನ್ನು ಎ0ದಿಗೂ ಬಳಸಿಕೊಳ್ಳಬೇಡಿ. ಇದರಿಂದ ತ್ವಚೆ ಶುಷ್ಕವಾಗುತ್ತದೆ
– ಗಡ್ಡದ ಮೇಲೆ ಕ0ಡೀಶನರ್ ಬಳಸಿಕೊಳ್ಳುವ ವಿಚಾರ ಶ್ಯಾ0ಪೂ ಬಳಸಿಕೊಳ್ಳುವಷ್ಟೇ ಮುಖ್ಯ.

Facebook Comments