ಬಸ್ ಮುಷ್ಕರದ ಎಫೆಕ್ಟ್ : ಮೆಟ್ರೋ ಫುಲ್‍ರಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.7- ಸಾರಿಗೆ ಬಸ್‍ಗಳ ಮುಷ್ಕರದಿಂದಾಗಿ ಇಂದು ಬೆಂಗಳೂರಿನ ಜನರು ಮೆಟ್ರೋಗೆ ಮುಗಿ ಬಿದ್ದಿದ್ದರು. ಬೆಳಗ್ಗೆ 7 ಗಂಟೆಯಿಂದಲೇ ಸೇವೆ ಆರಂಭಿಸಲಾಗಿತ್ತು. ಜನ ಸಾಲುಗಟ್ಟಿ ನಿಂತು ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದರು. ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಒಳ ಬಿಡಲಾಗುತ್ತಿತ್ತು.

ಪ್ರತಿ ಐದು ನಿಮಿಷಕ್ಕೊಮ್ಮೆ ರೈಲು ಸಂಚರಿಸುತ್ತಿತ್ತು. ಮಧ್ಯಾಹ್ನದ ವೇಳೆ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ನಮ್ಮ ಮೆಟ್ರೋ ಸೇವೆ ಪಡೆದಿದ್ದಾರೆ ಎಂದು ಮೆಟ್ರೋದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರಿಗೆ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಿ ಯಾವುದೇ ತೊಂದರೆಯಾಗದಂತೆ ಮೆಟ್ರೋ ಸಿಬ್ಬಂದಿಗಳು ಮುತುವರ್ಜಿ ವಹಿಸಿದ್ದರು. ಲಾಕ್‍ಡೌನ್, ಕೊರೊನಾ ಸಂಕಷ್ಟದ ನಂತರ ಮೆಟ್ರೋಗೆ ಇದೇ ಮೊದಲ ಬಾರಿ ಇಷ್ಟು ಮಂದಿ ಪ್ರಯಾಣಿಸಿದ್ದಾರೆ ಎಂದು ಹೇಳಿದ್ದಾರೆ.

Facebook Comments