ಮೆಟ್ರೋ ಕಾಸ್ಟ್ ಸೇವೆಗೆ ಸಿಎಂ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.25- ರಾಜಧಾನಿ ಬೆಂಗಳೂರಿನಿಂದಲೇ ಎಲ್ಲ ಕಡೆಗೂ ಅಗತ್ಯ ಸೇವೆ ಒದಗಿಸುವ ಮೆಟ್ರೋ ಕಾಸ್ಟ್ ಸೇವೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದರು. ಮೆಟ್ರೋ ಕಾಸ್ಟ್ ನೆಟ್‍ವರ್ಕ್ ಇಂಡಿಯಾ ಸಂಸ್ಥೆಯು ನಗರದ ಮಾಧವನಗರದಲ್ಲಿ ನೂತನವಾಗಿ ನಿರ್ಮಿಸಿರುವ ಸರ್ವರ್ ರೂಮ್‍ಗೆ ಸಿಎಂ ಇಂದು ಹಸಿರು ನಿಶಾನೆ ತೋರಿದರು.

ಉತ್ತರ ಕರ್ನಾಟಕ, ಮಹಾರಾಷ್ಟ್ರ, ಗೋವಾದಲ್ಲಿ ಕಳೆದ 3 ದಶಕಗಳಿಂದ ಕೇಬಲ್ ಸೇವೆ ಒದಗಿಸುತ್ತಿರುವ ಮೆಟ್ರೋ ಕಾಸ್ಟ್ ಇದೀಗ ರಾಜಧಾನಿ ಬೆಂಗಳೂರಿನಲ್ಲೂ ತನ್ನ ಸೇವೆಯನ್ನು ವಿಸ್ತರಿಸಿದೆ.

ಈಗಾಗಲೇ 5 ಲಕ್ಷ ಗ್ರಾಹಕರನ್ನು ಹೊಂದಿರುವ ಮೆಟ್ರೋ ಕಾಸ್ಟ್ ನೆಟ್ವರ್ಕ್ ಇಂಡಿಯಾ ಸಂಸ್ಥೆಯು ಪ್ರಸ್ತುತ ಮಾಧವನಗರದಲ್ಲಿ ಸರ್ವರೂಮ್ ಸ್ಥಾಪಿಸಿ ಸೇವೆ ಮಾಡಲು ಮುಂದೆ ಬಂದಿದೆ. ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಿ.ಎನ್.ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

Facebook Comments