ಸದ್ಯಕ್ಕೆ ಓಡಲ್ಲ ಮೆಟ್ರೋ ರೈಲುಗಳು, ಕೇಂದ್ರ ಸರ್ಕಾರ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 31-ಹೊಸ ಆದೇಶ ಬರುವವರೆಗೂ ದೇಶಾದ್ಯಂತೆ ಮೆಟ್ರೋ ರೈಲು ಓಡಾಟಕ್ಕೆ ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕೊರೋನಾ ವೈರಾಣು ಹರಡುವಿಕೆ ತಡೆಗಟ್ಟಲು ದೇಶಾದ್ಯಂತ ಮೆಟ್ರೋ ರೈಲು ಸಂಚಾರವನ್ನು ನಿಲ್ಲಿಸಲಾಗಿದೆ. ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಓಡಾಟಕ್ಕೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಮಾಡಲಾಗಿತ್ತು.

ವಿಪತ್ತು ನಿರ್ವಹಣಾ ಪ್ರಾಕಾರ ನಿನ್ನೆಯಷ್ಟೇ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ರಾಜ್ಯ ಸರ್ಕಾರಗಳೇ ಶಾಲಾ, ಕಾಲೇಜು, ಹೋಟೆಲ್‍ಗಳು ಸೇರಿದಂತೆ ಇತರೆ ವಾಣಿಜ್ಯ ವಹಿವಾಟುಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿತ್ತು.

ಆದರೆ, ಕೇಂದ್ರ ಗೃಹ ಇಲಾಖೆ ಇಂದು ನೀಡಿರುವ ಮಾಹಿತಿ ಅನ್ವಯ ದೆಹಲಿ ಮೆಟ್ರೋ ರೈಲು ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಅದರಂತೆ ದೇಶದ ವಿವಿಧ ನಗರಗಳಲ್ಲಿನ ಮೆಟ್ರೋ ರೈಲು ಸಂಚಾರವನ್ನು ಸದ್ಯಕ್ಕೆ ಆರಂಭಿಸದಂತೆ ಮೌಖಿಕ ಸೂಚನೆ ನೀಡಲಾಗಿದೆ.

Facebook Comments

Sri Raghav

Admin