ಎಂಜಿ ರಸ್ತೆಯಿಂದ ಬೈಯಪ್ಪನಹಳಿವರೆಗಿನ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.4- ಇಂದು ಸಂಜೆ ಐದರಿಂದ ನಾಳೆ ಬೆಳಿಗ್ಗೆ 7ರವರೆಗೆ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ.
ಟ್ರಿನಿಟಿ ಮತ್ತು ಹಲಸೂರು ಮಾರ್ಗದಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿರುವುದರಿಂದ ಇಂದು ಸಂಜೆ ನಾಳೆವರೆಗೆ ಮೆಟ್ರೋ ರೈಲು ಸಂಚಾರ ಇರುವುದಿಲ್ಲ ಎಂದು ಬಿಎಂಆರ್‍ಸಿಎಲ್ ಅಕಾರಿಗಳು ತಿಳಿಸಿದ್ದಾರೆ.  ನಾಳೆ ಬೆಳಿಗ್ಗೆ 7 ರಿಂದ ಮೆಟ್ರೋ ರೈಲು ಸಂಚಾರ ಎಂದಿನಂತಿರುತ್ತದೆ, ಎಂಜಿ ರಸ್ತೆಯಿಂದ ಕೆಂಗೇರಿವರೆಗಿನ ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.

Facebook Comments