ಸ್ಫೋಟಕ ಮಾಹಿತಿ ಬಹಿರಂಗಗೊಳಿಸಿದ ಮೆಕ್ಸಿಕನ್ ಡ್ರಗ್ ಲಾರ್ಡ್..!

ಈ ಸುದ್ದಿಯನ್ನು ಶೇರ್ ಮಾಡಿ

El Chapo'sವಾಷಿಂಗ್ಟನ್, ಜ.11- ಜೋಕ್ವಿನ್ ಚಾಪೊ ಮೆಕ್ಸಿಕೋ ಮೂಲದ ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳ ಸಾಗಣೆದಾರ ಜೋಕ್ವಿನ್ ಚಾಪೊ ಅಮೆರಿಕ ಪೊಲೀಸರು ಬಂಧಿಸಿದ್ದಾರೆ. ಅಮೆರಿಕಕ್ಕೆ ಸುಮರು 155 ಟನ್ ಮಾದಕ ದ್ರವ್ಯ ಕಳ್ಳ ಸಾಗಣೆ ಮಾಡಿದ ಆರೋಪ ಎದುರಿಸುತ್ತಿದ್ದು, ಮೆಕ್ಸಿಕನ್ ಡ್ರಗ್ ಲಾರ್ಡ್ ಎಂದೇ ಕರೆಯುವ ಈತನ ಬಂಧನದೊಂದಿಗೆ ಅಮೆರಿಕದಲ್ಲಿ ಅತೀ ದೊಡ್ಡ ಡ್ರಗ್ಸ್ ಕಳ್ಳಸಾಗಣೆ ಕೊಂಡಿಯೊಂದು ಕಳಚಿ ಬಿದ್ದಂತಾಗಿದ್ದು, ಈತನ ಬಂಧನ ಅಮೆರಿಕದಲ್ಲಿ ಭಾರಿ ಚರ್ಚೆಯನ್ನೇ ಹುಟ್ಟುಹಾಕಿದೆ.

ಪತ್ನಿ ಮತ್ತು ಪ್ರೇಯಸಿ ಮೇಲೆ ನಿಗಾ ಇಡಲು ಈತ ನೀಡಿದ್ದ ಎನ್‍ಕ್ರಿಪ್ಟೆಡ್ ಬ್ಲಾಕ್ ಬೆರ್ರಿ ಫೋನ್‍ಗಳಿಂದಲೇ ಈತನ ವಿರುದ್ಧದ ಸಾಕ್ಷ್ಯಗಳನ್ನು ಎಫ್‍ಬಿಐ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಅದರಿಂದಲೇ ಈತ ಅಮೆರಿಕಕ್ಕೆ ಸುಮಾರು 155 ಟನ್ ಮಾದಕ ದ್ರವ್ಯ ಕಳ್ಳ ಸಾಗಣೆ ಮಾಡಿರುವ ವಿಚಾರ ತಿಳಿದುಬಂದಿದೆ.
ಈ ಹಿಂದೆ ಎರಡು ಬಾರಿ ಈತನ ಬಂಧನವಾಗಿತ್ತಾದರೂ ಆತ ಚಾಣಾಕ್ಷತನದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಈತನನ್ನು ವಿಚಾರಣೆಗೆ ಒಳಪಡಿಸಿರುವ ತನಿಖಾಧಿಕಾರಿಗಳಿಗೆ ಸ್ಫೋಟಕ ಮಾಹಿತಿಗಳ ಲಭ್ಯವಾಗುತ್ತಿದ್ದು, ಪತ್ನಿ ಇರುವಾಗಲೇ ಈತ ಮತ್ತೋರ್ವ ಪ್ರೇಯಸಿಯೊಂದಿಗೆ ಕಾಲ ಕಳೆಯುತ್ತಿದ್ದನಂತೆ.

61 ವರ್ಷದ ಜೋಕ್ವಿನ್ ಚಾಪೊ ತನಗಿಂತಲೂ ಸುಮಾರು 30 ವರ್ಷ ಚಿಕ್ಕವಳಾದ ಎಮ್ಮಾ ಕರೊನೆಲ್‍ಳನ್ನು ವಿವಾಹವಾಗಿದ್ದ. ಎಮ್ಮಾ ಕರೊನೆಲ್ ಅವರ ತಂದೆ ಕೂಡ ಡ್ರಗ್ ಡೀಲರ್ ಆಗಿದ್ದು, ಆತನ ಸ್ನೇಹದೊಂದಿಗೆ ಈತ ಆತನ ಪುತ್ರಿಯನ್ನು ವಿವಾಹವಾಗಿದ್ದ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದಲ್ಲದೆ ಜೋಕ್ವಿನ್ ಚಾಪೊ ಗೆ ಓರ್ವ ಪ್ರೇಯಸಿ ಕೂಡ ಇದ್ದು, ಆಕೆಯ ಹೆಸರು ಅಗಸ್ಟಿನಾ ಕ್ಯಾಬನಿಸ್ ಅಕೋಸ್ಟಾ. ತುಂಬಾ ಸಂಶಯ ಮತ್ತು ಆಸೂಯೆಯ ವ್ಯಕ್ತಿಯಾಗಿರುವ ಈತನಿಗೆ ತನ್ನ ಪ್ರೇಯಸಿ ಮತ್ತು ಪತ್ನಿ ಮೇಲೆ ವಿಪರೀತ ಅನುಮಾನ.

ಇಬ್ಬರ ಮೇಲಿನ ಶಂಕೆಯಿಂದ ಇಬ್ಬರಿಗೂ ಎನ್‍ಕ್ರಿಪ್ಟೆಡ್ (ಗುಪ್ತ ಸಂಕೇತ) ಫೋನ್ ನೀಡಿ ಅದರ ಮೂಲಕ ಇವರಿಬ್ಬರ ಮೇಲೆ ಗೂಢಾಚಾರಿಕೆ ನಡೆಸುತ್ತಿದ್ದ. ಇದಕ್ಕಾಗಿಯೇ ಈತ ಪರಿಣಿತ ವ್ಯಕ್ತಿಯೊಬ್ಬನನ್ನು ಕೂಡ ನೇಮಿಸಿಕೊಂಡಿದ್ದನಂತೆ. ಇನ್ನು ತನ್ನ ಹೆಣ್ಣು ಮಕ್ಕಳನ್ನೂ ಜೋಕ್ವಿನ್ ಚಾಪೊ ಮಾದಕ ದ್ರವ್ಯ ಲೋಕದ ರಾಣಿಯರನ್ನಾಗಿ ಮಾಡಬೇಕು ಎಂದು ನಿರ್ಧರಿದ್ದನಂತೆ. ಈ ಬಗ್ಗೆ ತನ್ನ ಪತ್ನಿಯೊಂದಿಗೆ ಮಾತನಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಮ್ಮೆ ತನ್ನ ಪತ್ನಿಗೆ ಸಂದೇಶ ಕಳುಹಿಸಿದ್ದ ಚಾಪೊೀ, ತನ್ನ ಕಿರಿಯ ಮಗಳು (ಆಗ ಆಕೆಗೆ ಕೇವಲ ಒಂದು ವರ್ಷ) ತುಂಬಾ ಬುದ್ಧಿವಂತಳಾಗಿದ್ದು, ಆಕೆಗೆ ಎಕೆ 47 ಬಂದೂಕನ್ನು ಉಡುಗೊರೆಯಾಗಿ ನೀಡಬೇಕು ಎಂದುಕೊಂಡಿದ್ದ ವಿಚಾರವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

Facebook Comments