ಮೆಕ್ಸಿಕೊದಲ್ಲಿ ನಡೆದ ಗುಂಡಿನ ಕಾಳಗದಲ್ಲಿ 16 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಮೆಕ್ಸಿಕೊ ಸಿಟಿ, ಡಿ.2- ಮೆಕ್ಸಿಕೊದ ಕೊಹಹುಲಾ ರಾಜ್ಯದ ಪಟ್ಟಣದಲ್ಲಿ ಬಂದೂಕುಧಾರಿ ಬಂಡುಕೋರರು ನಡೆಸಿದ ದಾಳಿ ಮತ್ತು ಗುಂಡಿನ ಚಕಮಕಿ ನಂತರ 16 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ಸಶಸ್ತ್ರದಾರಿಗಳು ಮತ್ತು ಮೆಕ್ಸಿಕನ್ ಭದ್ರತಾ ಪಡೆಗಳ ನಡುವೆ ನಡೆದ ಭೀಕರ ಕಾಳಗದಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊವಾಹಿಲಾ ರಾಜ್ಯದಲ್ಲಿ ಭದ್ರತಾ ಪಡೆಗಳು ಶನಿವಾರ ನಡೆಸಿದ ಗಂಡಿನ ಕಾರ್ಯಚರಣೆಯಲ್ಲಿ ಕನಿಷ್ಠ 16 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳು ಸೇರಿದ್ದು ಹಲವು ಪುರಸಭೆಯ ಕಾರ್ಮಿಕರು ಕಾಣೆಯಾಗಿದ್ದಾರೆ ಎಂದು ಎಬಿಸಿ ಸುದ್ದಿ ವರದಿ ಮಾಡಿದೆ. ನರಮೇಧ ನಡೆಸಿ ಪರಾರಿಯಾಗಿರುವ ಶಸ್ತ್ರಸಜ್ಜಿತ ದಾಳಿಕೋರರಿಗಾಗಿ ಭದ್ರತಾ ಪಡೆಗಳು ಶೋಧ ಮುಂದುವರೆಸಿದ್ದಾರೆ.

Facebook Comments