ಎಂಜಿಆರ್ ಹುಟ್ಟುಹಬ್ಬಕ್ಕೆ ಮೋದಿ ಶುಭಾಶಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.17- ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ. ಭಾರತ ರತ್ನ ಎಂಜಿಆರ್ ಹಲವರ ಹೃದಯದಲ್ಲಿ ನೆಲೆಸಿದ್ದಾರೆ. ಚಲನಚಿತ್ರದಲ್ಲಿ ಮತ್ತು ರಾಜಕೀಯದಲ್ಲಿ ಅವರ ಸೇವೆ ವಿಶ್ವಮಾನ್ಯತೆ ಗಳಿಸಿದೆ. ಮುಖ್ಯಮಂತ್ರಿಯಾಗಿದ್ದಾಗಿನ ಅವಧಿಯಲ್ಲಿ ಅವರು ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಹಲವಾರು ಜನಪ್ರಿಯ ಯೋಜನೆಗಳನ್ನು ನೀಡಿದ್ದರು.

ಬಡತನ ನಿರ್ಮೂಲನೆ ಮತ್ತು ಮಹಿಳಾ ಸಬಲೀಕರಣಕ್ಕೆ ಸಾಕಷ್ಟು ಶ್ರಮಿಸಿದ್ದರು ಎಂದು ಪ್ರಧಾನಿ ತಮ್ಮ ಟ್ಬಿಟ್‍ನಲ್ಲಿ ಹೇಳಿದ್ದಾರೆ. 10 ವರ್ಷಗಳ ಕಾಲ ಅಧಿಕಾರ ನಡೆಸಿ ತಾವು ಸ್ಥಾಪಿಸಿದ ಎಐಎಡಿಎಂಕೆ ಪಕ್ಷಕ್ಕೆ ಭದ್ರ ಬುನಾದಿ ಹಾಕಿದ್ದಾರೆ ಎಂದು ಮೋದಿ ಹೇಳಿದ್ದಾರೆ. 1917ರಲ್ಲಿ ಜನಿಸಿದ ರಾಮಚಂದ್ರನ್ ಅವರು ಪ್ರಖ್ಯಾತ ನಟರಾಗಿ ಗುರುತಿಸಿಕೊಂಡಿದ್ದಾಗಲೇ ಸಿ.ಎನ್.ಅಣ್ಣಾದೊರೈ ನೇತೃತ್ವದ ಡಿಎಂಕೆ ಸೇರ್ಪಡೆಯಾಗಿದ್ದರು.

ಅಣ್ಣಾದೊರೈ ಅವರ ಸಾವಿನ ಬಳಿಕ ಎಂ. ಕರುಣಾನಿಧಿ ಅವರೊಂದಿಗಿನ ಭಿನ್ನಮತದಿಂದಾಗಿ 1972ರಲ್ಲಿ ಎಐಎಡಿಎಂಕೆ ಸ್ವಂತ ಪಕ್ಷ ಕಟ್ಟಿದರು. ಬಿಜೆಪಿ 2019ರ ಲೋಕಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ. ಮುಂದಿನ ಮಾರ್ಚ್, ಏಪ್ರಿಲ್‍ನಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದೆ.

Facebook Comments