ಐಪಿಎಲ್ ಪ್ಲೇ ಆಫ್‍ಗೇರುವ ಮೊದಲ ತಂಡ ಇಂದು ನಿರ್ಧಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಅಬುದಾಬಿ,ಅ.28- ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡಗಳಾಗಿರುವ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇಂದು ಮುಖಾಮುಖಿ ಯಾಗುತ್ತಿದ್ದು ಪ್ಲೇಆಫ್‍ಗೇರುವ ಮೊದಲ ತಂಡ ಯಾವುದೆಂದು ನಿರ್ಧಾರಗೊಳ್ಳಲಿದೆ. ಕಳೆದ ರಾತ್ರಿ ಹೈದ್ರಾಬಾದ್ ತಂಡದ ವಿರುದ್ಧ ಹೀನಾಯ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ 3ನೆ ಸ್ಥಾನಕ್ಕೆ ಕುಸಿದಿರುವುದರಿಂದ ಇಂದಿನ ಪಂದ್ಯಕ್ಕೆ ಮಹತ್ವ ಬಂದಿದೆ.

ಆರ್‍ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಈ ಹಿಂದೆ ತಾವು ಆಡಿದ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ 8 ವಿಕೆಟ್‍ಗಳ ವಿರೋಚಿತ ಸೋಲು ಕಂಡಿದ್ದರೂ ಕೂಡ ಇಂದಿನ ಪಂದ್ಯವನ್ನು ಗೆಲ್ಲಲು ಭಾರೀ ಪೈಪೋಟಿ ನಡೆಸುತ್ತಿದೆ.

ಗಾಯದ ಸಮಸ್ಯೆ:
ಪ್ಲೇಆಫ್ ಸನಿಹದಲ್ಲಿರುವಾಗಲೇ ಆರ್‍ಸಿಬಿ ಹಾಗೂ ಮಂಬೈ ಇಂಡಿಯನ್ಸ್ ತಂಡಗಳು ಗಾಯದ ಸಮಸ್ಯೆ ಎದುರಿಸುತ್ತಿದೆ. ಮುಂಬೈನ ಬ್ಯಾಟಿಂಗ್ ಬಲ ಎನಿಸಿಕೊಂಡಿರುವ ರೋಹಿತ್ ಶರ್ಮಾ ಗಾಯಗೊಂಡು ಎರಡು ಪಂದ್ಯಗಳಿಂದ ದೂರ ಉಳಿದಿದ್ದು ಇಂದಿನ ಪಂದ್ಯದಲ್ಲೂ ಆಡುವುದು ಬಹುತೇಕ ಅನುಮಾನವಾಗಿದ್ದರೆ, ಆರ್‍ಸಿಬಿ ತಂಡದ ಪ್ರಮುಖ ವೇಗದ ಅಸ್ತ್ರವಾಗಿರುವ ನವದೀಪ್ ಸೈನಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದು ಅವರು ಈ ಪಂದ್ಯದಿಂದ ಹೊರಗುಳಿಯುವ ಲಕ್ಷಣಗಳೇ ಹೆಚ್ಚಾಗಿ ಗೋಚರಿಸಿದೆ.

ಟಾಸ್ ಗೆದ್ದೋನೆ ಬಾಸು:
ಐಪಿಎಲ್ 13ರ ಬಹುತೇಕ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದ ತಂಡವೇ ಹೆಚ್ಚಾಗಿ ಗೆದ್ದಿರುವುದರಿಂದ ಇಂದಿನ ಪಂದ್ಯದಲ್ಲೂ ಟಾಸ್ ಗೆದ್ದೆನೋ ಬಾಸು. ಈ ವರ್ಷ ವಿರಾಟ್ ಬಲು ಅದೃಷ್ಟ ನಾಯಕನಾಗಿದ್ದು ಅತಿ ಹೆಚ್ಚು ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದಾರೆ, ಇಂದಿನ ಪಂದ್ಯದಲ್ಲೂ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಕಲೆ ಹಾಕಿ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‍ಮನ್‍ಗಳ ಮೇಲೆ ಒತ್ತಡ ಹಾಕಲು ಚಿಂತಿಸಿದ್ದಾರೆ.

ಪ್ಲೇಆಫ್‍ಗೇರುವ ಹುಮ್ಮಸ್ಸಿನಲ್ಲಿ ಎರಡು ತಂಡಗಳು ಇರುವುದರಿಂದ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಗೆಲುವಿನ ನಗೆ ಚೆಲ್ಲಲು ಆರ್‍ಸಿಬಿ ಹಾಗೂ ಮುಂಬೈ ತಂಡಗಳ ನಡುವಿನ ಕದನ ರೋಚಕವಾಗಲಿದೆ.

ಹಿಂದಿನ ಪಂದ್ಯದ ಫಲಿತಾಂಶ:
ಈ ಹಿಂದೆ ಎರಡು ತಂಡಗಳು ಮುಖಾಮುಖಿ ಯಾಗಿದ್ದಾಗ ಆರ್‍ಸಿಬಿಯ ಸ್ಫೋಟಕ ಆಟಗಾರ ಎಬಿಡಿ 24 ಎಸೆತಗಳಲ್ಲಿ 55 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 201ರನ್‍ಗೆ ಹಿಗ್ಗಿಸಿದ್ದರು. ನಂತರ ಬ್ಯಾಟಿಂಗ್ ಮಾಡಿದ ಮಂಬೈ ಪರ ಇಶಾನ್‍ಕಿಶನ್ 99 ರನ್ ಸಿಡಿಸಿ ಪಂದ್ಯವನ್ನು ಟೈಗೊಳಿಸಿದ್ದರು. ನಂತರ ನಡೆದ ಸೂಪರ್ ಓವರ್‍ನಲ್ಲಿ ಆರ್‍ಸಿಬಿ ಬೌಲರ್ ನವದೀಪ್‍ಸೈನಿ ಉತ್ತಮ ಬೌಲಿಂಗ್ ಪ್ರದರ್ಶಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಲಕ್ಕಿ ಪಿಚ್..
ಅಬುದಾಬಿ ಪಿಚ್ ಎರಡು ತಂಡಗಳಿಗೂ ಅದೃಷ್ಟ ಪಿಚ್ ಆಗಿದೆ. ಈ ಅಂಗಳದಲ್ಲಿ ಆರ್‍ಸಿಬಿ ಆಡಿರುವ 2 ಪಂದ್ಯಗಳನ್ನು ಗೆದ್ದಿದ್ದರೆ, ಮುಂಬೈ ಇಂಡಿಯನ್ಸ್ ಆಡಿರುವ 7 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ಸಾಧಿಸಿದ್ದರೆ, 2 ರಲ್ಲಿ ಮಾತ್ರ ಸೋಲು ಕಂಡಿದೆ.

ಬೂಮ್ರಾ 100: 
ಮುಂಬೈ ಇಂಡಿಯನ್ಸ್‍ನ ವೇಗದ ಬೌಲರ್ ಜಸ್‍ಪ್ರೀತ್‍ಬೂಮ್ರಾ ಇಂದಿನ ಪಂದ್ಯದಲ್ಲಿ 1 ವಿಕೆಟ್ ಕೆಡವಿದರೆ ಐಪಿಎಲ್ 100 ಹಾಗೂ ಅಂತಾರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‍ನಲ್ಲಿ 200 ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಳ್ಳಲಿದ್ದಾರೆ.

ಎಬಿಡಿ 9000: 
ಆರ್‍ಸಿಬಿ ತಂಡದ ಸ್ಫೋಟಕ ಆಟಗಾರ ಎಬಿಡಿ ಇಂದಿನ ಪಂದ್ಯದಲ್ಲಿ 19 ರನ್ ಗಳಿಸಿದರೆ ಟ್ವೆಂಟಿ-20 ಕ್ರಿಕೆಟ್‍ನಲ್ಲಿ 9000 ರನ್ ಗಳಿಸಲಿದ್ದಾರೆ. ಮುಂಬೈ ಇಂಡಿಯನ್ಸ್‍ನ ಯುವ ಆಟಗಾರ ಸೌರಭ್ ತಿವಾರಿ 13 ರನ್ ಗಳಿಸಿದರೆ ಚುಟುಕು ಮಾದರಿಯ ಕ್ರಿಕೆಟ್‍ನಲ್ಲಿ 3000 ರನ್ ಗಳಿಸಲಿದ್ದಾರೆ.

Facebook Comments