ಹೊಸ ವಿಡಿಯೋ ಗೇಮ್’ಗಳಿಗೆ ಮೈಕ್ರೋಸಾಫ್ಟ್’ನಿಂದ ಹೆಚ್ಚುವರಿ ಸಾಮರ್ಥ್ಯದ ಸ್ಟುಡಿಯೋ ಅಭಿವೃದ್ಧಿ ..!

ಈ ಸುದ್ದಿಯನ್ನು ಶೇರ್ ಮಾಡಿ

ds

ಇದು ವಿಡಿಯೋಗೇಮ್‍ಗಳ ನವೀನ ಲೋಕ. ದಿನಕ್ಕೊಂದು ಹೊಸ ಹೊಸ ವಿಡಿಯೋ ಗೇಮ್‍ಗಳು ಮಾರುಕಟ್ಟೆಗೆ ಲಗ್ಗೆ ಹಾಕುತ್ತಿವೆ. ದಿನಕ್ಕೊಂದು ಗೇಮ್‍ಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ವಿಸ್ತರಣೆಗಾಗಿ ಮೈಕ್ರೋಸಾಫ್ಟ್ ಸಂಸ್ಥೆಯು ತನ್ನ ಗೇಮ್ ಅಭಿವೃದ್ದಿ ಸ್ಟುಡಿಯೋ ಸಾಮರ್ಥ್ಯ ವಿಸ್ತರಿಸುತ್ತಿದೆ.
ವಿಡಿಯೋ ಗೇಮ್‍ಗಳ ಮಾರುಕಟ್ಟೆ ವಿಸ್ತರಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಖ್ಯಾತ ಮೈಕ್ರೋಸಾಪ್ಟ್ ಕಾಪೊರೇಷನ್ ಸಂಸ್ಥೆ ಎಕ್ಸ್‍ಬಾಕ್ಸ್ ಹೊಸ ಯೋಜನೆ ರೂಪಿಸಿದೆ.  ಐದು ನವ ಸೃಜನಾತ್ಮಕ ತಂಡಗಳನ್ನು ಹೊಂದುವ ಮೂಲಕ ತಮ್ಮ ಗೇಮ್ ಅಭಿವೃದ್ದಿ ಸ್ಟುಡಿಯೋಗಳ ಸಾಮರ್ಥ್ಯವನ್ನು ಇಮ್ಮಡಿಗೊಳಿಸುವ ಉದ್ದೇಶವನ್ನು ಮೈಕ್ರೋಸಾಫ್ಟ್ ಪ್ರಕಟಿಸಿದೆ.

ds-1

ಹಾರ್ಡ್‍ವೇರ್ ಬದಲಿಗೆ ಸಾಫ್ಟ್’ವೆರ್ ಅಭಿವೃದ್ದಿಗೆ ಹೆಚ್ಚು ಆದ್ಯತೆ ನಿಡಿರುವ ಮೈಕ್ರೋ ಸಾಫ್ಟ್, ಕಳೆದ ವರ್ಷ ಎಕ್ಸ್ ಬಾಕ್ಸ್ ಒನ್ ಎಕ್ಸ್ ಎಂಬ ಅತ್ಯಂತ ಪ್ರಬಲ ವಿಡಿಯೋಗೇಮ್ ಸ್ಟುಡಿಯೋ ವನ್ನು ಅನುಷ್ಠಾನಗೊಳಿಸಿ ಸುದ್ದಿ ಮಾಡಿತ್ತು. ಆಗಿನಿಂದಲೂ ವಿಡಿಯೋ ಮಾರುಕಟ್ಟೆ ಗಮನಾರ್ಹವಾಗಿ ವೃದ್ಧಿಯಾಗಿತ್ತು. ಇದು ಮತ್ತಷ್ಟು ಪ್ರಗತಿಯಾಗುತ್ತಿರುವುದರಿಂದ ಅದರ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದಾಗಿ ಎಕ್ಸ್ ಬಾಕ್ಸ್‍ನ ಮಾರುಕಟ್ಟೆ ನಿರ್ದೇಶಕ ಸಿಂಡಿ ವಾಕರ್ ತಿಳಿಸಿದ್ಧಾರೆ.  ವಿಡಿಯೋ ಗೇಮ್ ಪ್ರಿಯರ ಅಭಿರುಚಿ, ಮನರಂಜನೆ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಗಳನ್ನು ನಾವು ಗಮನದಲ್ಲಿಟ್ಟುಕೊಂಡಿದ್ದೇವೆ. ಗೇಮ್‍ಗಳನ್ನು ಹೆಚ್ಚು ನೈಜವಾಗಿಸಲು ನಾವು 4-ಕೆ ತಂತ್ರಜ್ಞಾನಗಳನ್ನು ಬಳಸುತ್ತಿದ್ದೇವೆ. ಇದಕ್ಕಾಗಿ ಐದು ಕ್ರಿಯೇಟಿವ್ ತಂಡಗಳನ್ನು ನಾವು ಹೊಂದಿದ್ದೇವೆ. ಈ ಮೂಲಕ ನಮ್ಮ ಸ್ಟುಡಿಯೋ ಸಾಮರ್ಥ್ಯ ಮತ್ತಷ್ಟು ವಿಸ್ತರಣೆಯಾಗಲಿದೆ ಎಂದು ಅವರು ವಿವರಿಸಿದ್ದಾರೆ.

Facebook Comments

Sri Raghav

Admin