ಮಧ್ಯರಾತ್ರಿ ಠಾಕ್ರೆ-ಪವಾರ್ ಮಹತ್ವದ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ನ.22- ಗಂಟೆಗೊಂದು ಹೊಸ ಹೊಸ ಬೆಳವಣಿಗೆಯಿಂದಾಗಿ ಕುತೂಹಲದ ಕೇಂದ್ರ ಬಿಂದುವಾಗಿರುವ ಮಹಾರಾಷ್ಟ್ರದಲ್ಲಿ ನಿನ್ನೆ ತಡರಾತ್ರಿ ಮತ್ತೊಂದು ರಾಜಕೀಯ ವಿದ್ಯಮಾನ ನಡೆದಿದೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ತಡ ರಾತ್ರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಪವಾರ್ ಅವರ ನಿವಾಸದಲ್ಲಿ ಒಂದು ಗಂಟೆಗೂ ಅಧಿಕ ಸಮಯ ನಡೆದ ಮಾತುಕತೆಯಲ್ಲಿ ಎನ್‍ಸಿಪಿ ಮತ್ತು ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸುವ ಪ್ರಯತ್ನವನ್ನು ಶಿವಸೇನೆ ನಾಯಕರು ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ನಿನ್ನೆ ಶರದ್ ಪವಾರ್ ದೆಹಲಿಯಿಂದ ಆಗಮಿಸಿದ್ದರು. ಈ ಸಭೆಯ ವೇಳೆ ಶಿವಸೇನೆ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಕೂಡ ಇದ್ದರು.ಆದರೆ ಕಾಂಗ್ರೆಸ್‍ನ ಯಾವುದೇ ನಾಯಕರು ಇರಲಿಲ್ಲ.

ಇದು ಉನ್ನತ ಮಟ್ಟದ ನಾಯಕರ ನಡುವಿನ ಮಾತುಕತೆಯಾಗಿದ್ದರಿಂದ ಅವರಿಗೆ ಮಾತ್ರ ಏನು ಮಾತುಕತೆ ನಡೆಯಿತು ಎಂದು ಗೊತ್ತಿದೆಯಷ್ಟೆ. ಸರ್ಕಾರ ರಚನೆ ಮಾಡಿ ಸ್ಥಾನಗಳ ಹಂಚಿಕೆ ಸಂಬಂಧ ಅಂತಿಮ ಘಟ್ಟದ ಮಾತುಕತೆ ನಡೆಸುವ ಸಂಬಂಧ ಈ ಮಾತುಕತೆಯಾಗಿರಬಹುದು ಎಂದು ಎನ್ ಸಿಪಿ ನಾಯಕರು ಹೇಳಿದ್ದಾರೆ.

ಅಗತ್ಯಬಿದ್ದರೆ ವಿದೇಶದ ಸೂಕ್ತ ಸಂಪರ್ಕದ ಮೂಲಕ ಆತನನ್ನು ಪತ್ತೆಹಚ್ಚಿ ಬಂಧಿಸಿ ಕರೆ ತರಲಾಗುವುದು ಎಂದು ಅಸರಿ ಹೇಳಿದರು.

Facebook Comments