ಕಾರ್ಮಿಕರನ್ನು ವಾಪಸ್ ಕಳಿಸಿಯುವ ವಿಷಯದಲ್ಲಿ ಒತ್ತಡಕ್ಕೆ ಸಿಲುಕಿದ ಸರ್ಕಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 6- ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಅವರ ತವರೂರಿಗೆ ಕಳುಹಿಸುವ ವಿಷಯದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಒತ್ತಡದಲ್ಲಿ ಸಿಲುಕಿದ್ದು, ಕದ್ದು ಮುಚ್ಚಿ ಒಂದಷ್ಟು ಮಂದಿಯನ್ನು ಸಾಗ ಹಾಕಿದೆ.

ಬಿಹಾರ, ಜಾರ್ಖಾಂಡ್, ಈಶಾನ್ಯ ರಾಜ್ಯಗಳ ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆಗಳಲ್ಲಿ ಉದ್ಯೋಗ ನಿಮಿತ ನೆಲೆಸಿz್ದÁರೆ. ಅದರಲ್ಲಿ ಬಿಹಾರ ಮತ್ತು ಜಾರ್ಖಾಂಡ್ ರಾಜ್ಯದವರೆ ಸುಮಾರು 2 ಲಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ.

ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಲ್ಲಿ ವಿಶೇಷ ರೈಲು ವ್ಯವಸ್ಥೆ ಮಾಡಿ ಕಾರ್ಮಿಕರನ್ನು ತವರೂರಿಗೆ ಕಳುಹಿಸಿದೆ. ಊರಿಗೆ ಫೋನ್ ಮಾಡಿದಾಗ ಈ ವಿಷಯ ತಿಳಿದುಕೊಂಡ ಕಾರ್ಮಿಕರು ತಾವು ತವರೂರಿಗೆ ತೆರಳಲು ಮುಂದಾದರು. ಆದರೆ ಅದಕ್ಕೆ ಅವರನ್ನು ದುಡಿಸಿಕೊಳ್ಳುತಿತಿದ್ದ ಮಾಲೀಕರು ಒಪ್ಪಲಿಲ್ಲ.

ಊಟ ತಿಂಡಿಗೆ ಮಾಲೀಕರು ಹಣ ನೀಡಲು ಒಪ್ಪುತ್ತಿಲ್ಲ. ಕೆಲಸ ಮಾಡದೆ ಹಣ ಕೊಡುವುದಿಲ್ಲ ಎಂದು ತಗಾದೆ ತೆಗೆದಿದ್ದಾರೆ. ಹಾಗಿದ್ದರೆ ನಾವು ಊರಿಗೆ ಹೋಗುತ್ತೇವೆ ಎಂದರೂ ಮಾಲೀಕರು ಒಪ್ಪಿಲ್ಲ. ಕೊನೆಗೆ ವಲಸೆ ಕಾರ್ಮಿಕರೆಲ್ಲಾ ಒಟ್ಟಾಗಿ ಪ್ರತಿಭಟನೆಗೆ ಇಳಿದಾಗ ಒತ್ತಡ ಹೆಚ್ಚಾಗಿದೆ.

ಪೊಲೀಸರು ಮಧ್ಯ ಪ್ರವೇಶ ಮಾಡಿ ಸಮಾಧಾನ ಪಡಿಸಲು ಮುಂದಾದಾಗ ರೊಚ್ಚಿಗೆದ್ದ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಘರ್ಷಣೆಗಳಾಗಿವೆ. ಕೆಲವೆಡೆ ಕಾರ್ಮಿಕರು ನಡೆದುಕೊಂಡೆ ಊರಿಗೆ ಹೋಗುತ್ತೇವೆ ಎಂದು ಬ್ಯಾಗ್ ತೆಗೆದುಕೊಂಡು ರಾತ್ರೋರಾತ್ರಿ ಹೊರಟು ಬಿಟ್ಟಿದ್ದಾರೆ. ಕರ್ನಾಟಕದ ಅಂತರ ಜಿಲ್ಲಾ ಕಾರ್ಮಿಕರನ್ನು ವಿಶೇಷ ಬಸ್ ಗಳ ಮೂಲಕ ಅವರ ಊರಿಗೆ ಕಳುಹಿಸಿಕೊಟ್ಟ ರಾಜ್ಯ ಸರ್ಕಾರಕ್ಕೆ ಹೊರ ರಾಜ್ಯಗಳ ಕಾರ್ಮಿಕರು ತಲೆ ನೋವಾಗಿದ್ದಾರೆ.

ಕೊನೆಗೆ ರೈಲ್ವೆ ಇಲಾಖೆಯ ಜೊತೆ ಮಾತುಕತೆ ನಡೆಸಿ ಸೋಮವಾರ ಮತ್ತು ಮಂಗಳವಾರ ಎರಡು ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿ ಸುಮಾರು ಒಂದು ಸಾವಿರ ಕಾರ್ಮಿಕರನ್ನು ಕಳಹಿಸಲಾಗಿದೆ. ಮೊದಲ ಹಂತದಲ್ಲಿ ಸೌತ್ ಈಸ್ಟ್ ವಿಭಾಗದಲ್ಲಿನ ಕಾರ್ಮಿಕರನ್ನು ಕಳುಹಿಸಿಕೊಡಲಾಗಿದೆ.

ಸೋಮವಾರ ಬಿಹಾರದ ಕಾರ್ಮಿಕರನ್ನು, ಮಂಗಳವಾರ ಜಾರ್ಖಾಂಡ್ ನ ಕಾರ್ಮಿಕರನ್ನು ಕೊಲಾರ ಜಿಲ್ಲೆಯ ಮಾಲೂರಿಗೆ ಕರೆದುಕೊಂಡು ಹೋಗಿ ಅಲ್ಲಿಂದ ರೈಲಿನ ಮೂಲಕ ಕಳುಹಿಸಿಕೊಡಲಾಗಿದೆ. ಪ್ರಯಾಣಭತ್ಯೆಯನ್ನು ಕಾರ್ಮಿಕರಿಂದ ವಸೂಲಿ ಮಾಡಲಾಗಿದೆ. ಗುಂಪು ಉಂಟಾಗಿ ಸೋಂಕು ಹರಡಬಾರದು ಎಂಬ ಕಾರಣಕ್ಕೆ ಪೊಲೀಸರು ಕಾರ್ಮಿಕರ ಹೆಸರಿಗೆ ರೈಲ್ವೆ ಟಿಕೆಟ್ ಖರೀದಿಸಿ ಕೊಟ್ಟಿದ್ದಾರೆ.

ಉಳಿದಂತೆ ನಿನ್ನೆ ಮತ್ತಷ್ಟು ಕಾರ್ಮಿಕರನ್ನು ಕಳುಹಿಸಿಕೊಡಲು ತಯಾರಿ ನಡೆದಿತ್ತು. ಅದಕ್ಕಾಗಿ ಬಿಎಂಟಿಸಿ ಬಸ್‍ಗಳಲ್ಲಿ ಒಂದಷ್ಟು ಮಂದಿಯನ್ನು ಮಾಲೂರಿನ ರೈಲ್ವೆ ನಿಲ್ದಾಣದತ್ತ ಕರೆದೊಯ್ಯಲಾಗುತ್ತಿದೆ. ಆದರೆ ಕೊನೆ ಕ್ಷಣದಲ್ಲಿ ಸರ್ಕಾರ ನಿರ್ಧಾರ ಬದಲಿಸಿದೆ.

ಕಾರ್ಮಿಕರ ತವರೂರಿನ ಸರ್ಕಾರದ ಅನುಮತಿ ಸಿಕ್ಕಿಲ್ಲ ಎಂದು ನೆಪ ಹೇಳಿ ವಾಪಾಸ್ ಕರೆ ತರಲಾಗಿದೆ. ಆದರೆ ಇದಕ್ಕೆ ಕೆಲ ಬಿಲ್ಡರ್‍ಗಳು ಮತುತಿ ಬಿಎಂಆರ್‍ಸಿಲ್ ಸಂಸ್ಥೆ ಕಾರ್ಮಿಕರ ಪ್ರಯಾಣಕ್ಕೆ ಅಡ್ಡಿ ಪಡಿಸಿದೆ ಎಂದು ಹೇಳಲಾಗಿದೆ.

ಕಾರ್ಮಿಕರು ತವರಿಗೆ ಹೋದರೆ ಇಲ್ಲಿನ ನಿರ್ಮಾಣ ಕಾಮಗಾರಿಗಳು ನಿಂತು ಹೋಗುತ್ತಿವೆ ಎಂಬ ಕಾರಣಕ್ಕೆ ಕೆಲಸಗಾರರನ್ನುಇಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೂ ಬೆಂಗಳೂರು ಪೊಲೀಸ್ ವಿಭಾಗವಾರು ಕಾರ್ಮಿಕರನ್ನು ತವರೂರಿಗೆ ಕಳುಹಿಸಲು ಹಂತ ಹಂತವಾಗಿ ವ್ಯವಸ್ಥೆ ಮಾಡುವುದಾಗಿ ಹೇಳಿ ಪ್ರತಿಭಟಿಸುತ್ತಿರುವ ಕಾರ್ಮಿಕರನ್ನು ಸಮಾಧಾನ ಪಡಿಸಲಾಗುತ್ತಿದೆ.

Facebook Comments

Sri Raghav

Admin