ರಿವರ್ಸ್ ಮೈಗ್ರೇಶನ್ ಎಫೆಕ್ಟ್ : ರಾಜ್ಯದಲ್ಲಿ ತಲೆದೋರಿದ ಕಾರ್ಮಿಕರ ಕೊರತೆ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಜೂ, 2- ಬಹುತೇಕ ಲಾಕ್ಡೌನ್ ಸಡಿಲಿಕೆ ಯಾಗ್ತಿದ್ದಂತೆ ಬಹುತೇಕ ವಲಸೆ ಕಾರ್ಮಿಕರು ವಾಣಿಜ್ಯ ನಗರಿ ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಿಂದ ಶೇ.90ರಷ್ಟು ಕಾರ್ಮಿಕರು ತೊರೆದಿದ್ದಾರೆ. ಕಾರ್ಮಿಕರು ತವರು ರಾಜ್ಯಗಳಿಗೆ ಮರಳಿ ಹೋಗುತ್ತಿದ್ದಂತೆ ವಾಣಿಜ್ಯ ಚಟುವಟಿಕೆಗಳಿಗೆ ಕಾರ್ಮಿಕರ ಕೊರತೆ ಎದುರಾಗಿದೆ. ಕೊರೊನಾ ಪರಿಣಾಮದಿಂದ ವಾಣಿಜ್ಯೋದ್ಯಮಕ್ಕೆ ನೇರವಾಗಿ ಪೆಟ್ಟು ಬಿದ್ದಿದೆ.

ಆರ್ಥಿಕ ಕುಸಿತದ ನಡುವೆ ಈಗ ವಾಣಿಜ್ಯೋ ದ್ಯಮಕ್ಕೆ ಕಾರ್ಮಿಕರ ಕೊರತೆ ತಲೆದೋರಿದ್ದರಿಂದ ದೊಡ್ಡ ಹೊಡೆತ ಬಿದ್ದಿದೆ.  ದೊಡ್ಡ ಗಾತ್ರದ ಕಟ್ಟಡ, ಬೃಹತ್ ಪ್ರಮಾಣದ ಕೈಗಾರಿಕೆ ಚಟುವಟಿಕೆಗಳು, ಬೀದಿ ಬದಿಯ ವ್ಯಾಪಾರಿ, ಪಾನೀಪುರಿ, ಐಸ್ ಕ್ರೀಂ ತಯಾರಿಕೆ ಜೊತೆಗೆ ಮಾರಾಟಕ್ಕೆ ಹೊಡೆತ ಬಿದ್ದಿದೆ.

ತಮ್ಮೂರುಗಳತ್ತ ತೆರಳುತ್ತಿರುವ ವಲಸೆ ಕಾರ್ಮಿಕರು, ವಾಣಿಜ್ಯೋದ್ಯಮಕ್ಕೆ ಕಾರ್ಮಿಕರ ಕೊರತೆ ಹುಬ್ಬಳ್ಳಿಯ ತಾರಿಹಾಳ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳಿವೆ. ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ 250 ಕ್ಕೂ ಹೆಚ್ಚು ಕೈಗಾರಿಕೆಗಳಿವೆ.

ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಹೊರ ರಾಜ್ಯದಿಂದ ಬಂದಿದ್ದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಈಗ ಕಾರ್ಮಿಕರು ಮರಳಿ ಊರಿಗೆ ಹೋಗಿದ್ದು, ಕಟ್ಟಡ ನಿರ್ಮಾಣ, ಪೇಂಟಿಂಗ, ಕಾರ್ಪೆಂರ್ಟ, ಹೋಟೆಲ್ಗಳಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದ ಸಾವಿರಾರು ಅನ್ಯರಾಜ್ಯಗಳ ಕಾರ್ಮಿಕರು ತಮ್ಮ ತಮ್ಮ ಊರುಗಳತ್ತ ಹೋಗಿದ್ದಾರೆ.

ಹೀಗಾಗಿ ಬಹುತೇಕ ಕೈಗಾರಿಕೆಗಳಿಂದ ಹಿಡಿದು ಸಣ್ಣಪುಟ್ಟ ವ್ಯಾಪಾರ ವ್ಯವಹಾರ ನಡೆಸುವುದೂ ಕಷ್ಟವಾಗಿದೆ.ಇದುವರೆಗೆ ವಿಶೇಷ ರೈಲುಗಳ ಮೂಲಕ ಧಾರವಾಡ ಜಿಲ್ಲಾಯಿಂದ ಅಂದಾಜು 20 ಸಾವಿರ ಕಾರ್ಮಿಕರು ತಮ್ಮೂರುಗಳಿಗೆ ತೆರಳಿದ್ದಾರೆ. ಉತ್ತರ ಪ್ರದೇಶಕ್ಕೆ 7,528, ರಾಜಸ್ಥಾನಕ್ಕೆ 2,795, ಬಿಹಾರಕ್ಕೆ 3,160, ಜಾರ್ಖಂಡ್ 1,477 ಸೇರಿದಂತೆ 15 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಧಾರವಾಡ ಜಿಲ್ಲಾ ತೊರೆದಿದ್ದಾರೆ.

ಹೊರ ರಾಜ್ಯದ ಕಾರ್ಮಿಕರು ತಮ್ಮ ರಾಜ್ಯಕ್ಕೆ ತೆರಳುತ್ತಿದ್ದಂತೆ ಸ್ಥಳೀಯ ಕಾರ್ಮಿಕರಿಗೆ ಡಿಮ್ಯಾಂಡ್ ಹೆಚ್ಚಾಗಿದ್ರೂ, ಕಾರ್ಮಿಕರು ಮಾತ್ರ ಬೇಕಾದಷ್ಟು ಸಂಖ್ಯೆಯಲ್ಲಿ ಸಿಗುತ್ತಿಲ್ಲ. ಇನ್ನು ಇಲ್ಲಿಯ ಜನರಿಗೆ ಕೌಶಲ್ಯದ ಕೊರತೆಯೂ ಇದೆ. ಲಾಕ್‍ಡೌನ್ ಇದ್ದಾಗ ಒಂದು ತರಹದ ಸಂಕಷ್ಟ ಅನುಭವಿಸಿದರೆ ಲಾಕ್‍ಡೌನ್ ಸಡಿಲವಾಗ್ತಿದ್ದಂತೆ ಮತ್ತೊಂದು ರೀತಿಯ ಸಂಕಷ್ಟ ಎದುರಾಗಿದ್ದು ವ್ಯಾಪಾರ ವಹಿವಾಟಿನ ಮೇಲೆ ಹೊಡೆತ ಬಿದ್ದಿದೆ.

ಲಾಕ್‍ಡೌನ್‍ದಿಂದಾಗಿ ಮೊದಲೇ ಬಡವರು ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಆಗಿಲ್ಲ. ಇದರ ಜೊತೆಗೆ ಕಳೆದ ವರ್ಷ ಸುರಿದ ಮಳೆ ಮತ್ತು ನೆರೆಯಿಂದ ಸಾಕಷ್ಟು ಮನೆಗಳನ್ನು ಕಳೆದುಕೊಳ್ಳಲಾಗಿದೆ. ಇನ್ನು ಆ ಮನೆಗಳನ್ನು ನಿರ್ಮಿಸಲು ಆಗಿಲ್ಲ. ಈಗ ಏಕಾಏಕಿ ಸಿಮೆಂಟ್, ಕಬ್ಬಿಣ ದರ ಹೆಚ್ಚಳವಾಗಿದ್ದು ಕಾರ್ಮಿಕರು ಸಹ ಸಿಗುತ್ತಿಲ್ಲ.

Facebook Comments