ವಿಧಾನಸಭೆಯಲ್ಲಿ ಕೈಕೊಟ್ಟ ಮೈಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.24- ವಿಧಾನಸಭೆಯ ಸದನದ ಪ್ರಾರಂಭದಲ್ಲೇ ಇಂದು ಮೈಕ್ ಕೈಕೊಟ್ಟಿತು. ಇಂದು ಬೆಳಗ್ಗೆ ಸದನ ಪ್ರಾರಂಭವಾಗುತ್ತಿದ್ದಂತೆ ಮೈಕ್ ಕಾರ್ಯನಿರ್ವಹಿಸದಿರುವುದನ್ನು ಗಮನಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡಲೇ ಸರಿ ಪಡಿಸುವಂತೆ ಸೂಚಿಸಿದರು.

ಕೆಲ ಕಾಲ ಮೈಕ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಪರ್ಯಾಯ ಮೈಕ್ ಬಳಸಿ ಕಲಾಪ ಪ್ರಾರಂಭಿಸಿದರು. ಕೆಲವು ಸದಸ್ಯರು ಸರಿಯಾಗಿ ಕೇಳುತ್ತಿಲ್ಲ ಎಂದು ಮನವಿ ಮಾಡಿದರು.

ಜಂಟಿ ಅವೇಶನದ ಸಿದ್ಧತೆಯಿಂದ ಹೀಗಾಗಿರಬಹುದು. ಸರಿಹೋಗಲಿದೆ ಎಂದು ಹೇಳುತ್ತಾ ಪ್ರಶ್ನೋತ್ತರ ಕಲಾಪ ಆರಂಭಿಸಿದರು. ಅಷ್ಟರಲ್ಲಿ ಮೈಕ್ ವ್ಯವಸ್ಥೆ ಸುಸ್ಥಿತಿಗೆ ಬಂದಿತು.

Facebook Comments

Sri Raghav

Admin