ಸೇನೆ ಗುಂಡಿಗೆ ಉಗ್ರ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ,ಆ.3-ಜಮ್ಮು ಮತ್ತು ಕಾಶ್ಮೀರದ ಬಂಡಿಪೂರ್ ಜಿಲ್ಲೆಯಲ್ಲಿ ಭಾರತೀಯ ಸೇನೆ ನಡೆಸಿದ ಎನ್‍ಕೌಂಟರ್‍ನಲ್ಲಿ ಉಗ್ರಗಾಮಿಯೊಬ್ಬ ಹತನಾಗಿದ್ದಾನೆ. ಉತ್ತರ ಕಾಶ್ಮೀರದ ಬಂಡಿಪೂರ್ ಜಿಲ್ಲೆಯ ಚಂದಾಡಿ ಪ್ರದೇಶದಲ್ಲಿ ರಕ್ಷಣಾ ಪಡೆಗಳು ಉಗ್ರರ ಅಡಗು ತಾಣಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದವು.

ಈ ವೇಳೆ ಉಗ್ರಗಾಮಿ ಸೇನಾ ಪಡೆಗಳು ಗುಂಡು ಹಾರಿಸಿದಾಗ ಪ್ರತಿಯಾಗಿ ಸೇನೆ ನಡೆಸಿದ ಎನ್‍ಕೌಂಟರ್‍ನಲ್ಲಿ ಉಗ್ರಗಾಮಿಯೊಬ್ಬನನ್ನು ಹೊಡೆದುರುಳಿಸಲಾಗಿದೆ. ಇನ್ನು ಈ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ ಮುಂದುವರೆದಿದ್ದು, ಮೃತ ಉಗ್ರನ ಬಗ್ಗೆ ಇನ್ನೂ ಖಚಿತ ವಿವರ ಸಿಕ್ಕಿಲ್ಲ. ಆತನ ಬಳಿ ಇದ್ದ ಶಸ್ತ್ರಾಸ್ತ್ರವನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments