ಇಬ್ಬರು ಉಗ್ರರ ಸಹಚರರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ,ಏ.1-ಲಷ್ಕರ್-ಎ-ತೋಯ್ಬಾ(ಎಲ್‍ಇಟಿ) ಸಂಘಟನೆಗೆ ಸೇರಿದ ಇಬ್ಬರು ಉಗ್ರರ ಸಹಚರರನ್ನು ಭದ್ರತಾ ಪಡೆ ಬಂಧಿಸಿದೆ. ಲಾಲೂ ಶೇಷಗರಿ ಹೈದರ್‍ಪೆಫೋರಾ ನಿವಾಸಿ ಅಕ್ವಿಬ್ ಅಹ್ಮದ್ ವಾನಿ ಮತ್ತು ನಾಡಿರ್‍ಗುಂಡ್ ಹಮ್ಹಾಮ ನಿವಾಸಿಯಾದ ಆದಿಲ್ ಮಂಜೂರ್ ಮಿರ್ ಬಂಧಿತ ಉಗ್ರ ಸಹಚರರು. ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಲಾಲೂ ಶೇಷಗರಿ ಹೈದರ್‍ ಪ್ಪೋರಾದಲ್ಲಿ ಸೇನಾ ಪಡೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಇಬ್ಬರನ್ನು ಬಂಧಿಸಿ, ಅವರಿಂದ ವಿಧ್ವಂಸಕ ಕೃತ್ಯಗಳಿಗೆ ಬಳಸುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಇಬರು ಮಧ್ಯ ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಹೈದಪ್ಪೋರಾ ಮತ್ತು ಹಮ್ಹಾಮಾ ಪ್ರದೇಶಗಳಲ್ಲಿ ಎಲ್‍ಇಟಿ ಉಗ್ರರಿಗೆ ಆಶ್ರಯ ನೀಡಿ ಸಹಕರಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಅಲ್ಲದೆ ವಿವಿಧ ಸಾಮಾಜಿಕ ಮಾಧ್ಯಮದ ವೇದಿಕೆಗಳ ಮೂಲಕ ಪಾಕಿಸ್ತಾನ ಮೂಲದ ಭಯೋತ್ಪಾದಕ ಕಮಾಂಡರ್‍ಗಳೊಂದಿಗೆ ಸಂಪರ್ಕ ಹೊಂದಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Facebook Comments