ಸೇನಾ ಶಿಬಿರದ ಮೇಲೆ ಭಯೋತ್ಪಾದಕರ ಗ್ರೆನೇಡ್ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು, ಜೂ.23-ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ನೆಲೆಗಳು ಮತ್ತು ಯೋಧರನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ಪ್ರಚೋದಿತ ಉಗ್ರಗಾಮಿಗಳು ದಾಳಿ ನಡೆಸಲಿದ್ದಾರೆ ಎಂಬ ಗುಪ್ತಚರ ಮಾಹಿತಿ ಬೆನ್ನಲ್ಲೇ ಪುಲ್ಮಾಮಾದಲ್ಲಿ ವಿಧ್ವಂಸಕ ಕೃತ್ಯದ ವಿಪಲ ಯತ್ನವೊಂದು ನಿನ್ನೆ ರಾತ್ರಿ ನಡೆದಿದೆ.

ಕಾಶ್ಮೀರದ ಪುಲ್ಮಾಮಾ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಉಗ್ರಗಾಮಿಗಳ ಉಪಟಳ ತೀವ್ರವಾಗಿ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ನಿನ್ನೆ ರಾತ್ರಿ ಸುಮಾರು 8.40ರಲ್ಲಿ ಟ್ರಾಲ್ ಪ್ರದೇಶದ ಬಟಾಗುಂಡ್‍ನಲ್ಲಿ ಸಿಆರ್‍ಪಿಎಫ್ ಶಿಬಿರದ ಮೇಲೆ ದಾಳಿ ಯತ್ನ ನಡೆದಿದೆ.

ಉಗ್ರಗಾಮಿಗಳು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಕ್ಯಾಂಪ್ ಮೇಲೆ ಗ್ರೆನೇಡ್ ಎಸೆದು ಪರಾರಿಯಾದರು. ಗ್ರೆನೇಡ್ ಸೋಟಗೊಂಡರೂ ಅದೃಷ್ಟವಶಾತ್ ಸಿಆರ್‍ಪಿಎಫ್ ಯೋಧರಿಗೆ ಅಪಾಯವಾಗಲಿಲ್ಲ.

ತಕ್ಷಣ ಎಚ್ಚೆತ್ತ ಸಿಬ್ಬಂದಿ ಭಯೋತ್ಪಾದರ ಮೇಲೆ ಗುಂಡು ಹಾರಿಸಿದರು. ಆದರೆ ಉಗ್ರರು ಕತ್ತಲಲ್ಲಿ ಕಣ್ಮರೆಯಾದರು. ಆತಂಕವಾದಿಗಳಿಗಾಗಿ ಆ ಪ್ರದೇಶದಲ್ಲಿ ತೀವ್ರ ಶೋಧ ಮುಂದುವರಿದಿದೆ.

Facebook Comments

Sri Raghav

Admin