ಸೇನಾ ಯುದ್ಧ ಸಾಮಥ್ರ್ಯ ವೃದ್ಧಿಗೆ 130 ಶತಕೋಟಿ ವೆಚ್ಚ ಮಾಡಲು ಕೇಂದ್ರ ತೀರ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.11- ಭಾರತೀಯ ಸೇನೆಯ ಮೂರೂ ದಳಗಳಾದ ಭೂ ಸೇನೆ, ವಾಯು ಪಡೆ ಮತ್ತು ನೌಕಾ ದಳಗಳನ್ನು ಅತ್ಯಾಧುನೀಕರಣಗೊಳಿಸಿ ಯುದ್ಧ ಸಾಮಥ್ರ್ಯವನ್ನು ಬಲಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು, ಯುದ್ಧ ವಿಮಾನ, ಜಲಾಂತರ್ಗಾಮಿ ನೌಕೆ ಮತ್ತು ಯುದ್ಧ ಹಡಗುಗಳನ್ನು ಮುಂದಿನ 7 ವರ್ಷಗಳಲ್ಲಿ ಕ್ರೋಢೀಕರಿಸಿ ಸೇನಾ ಪಡೆಯ ಸಾಮಥ್ರ್ಯವನ್ನು ಅಗಾಧ ಮಟ್ಟದಲ್ಲಿ ಹೆಚ್ಚಿಸಲಿದೆ.

ದೇಶದಲ್ಲಿ ಭದ್ರತೆ ವಿಚಾರದಲ್ಲಿ ಸಂಕೀರ್ಣ ಪರಿಸ್ಥಿತಿ ಇರುವಂತಹ ಸಂದರ್ಭದಲ್ಲಿ ಮಿಲಿಟರಿ ಪಡೆಯನ್ನು ಆಧುನೀಕರಣಗೊಳಿಸಿ ಬಲಪಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಸರ್ಕಾರದ ಈ ಬೃಹತ್ ಯೋಜನೆಯಡಿ, ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಸಶಸ್ತ್ರ ಪಡೆಗಳ ಯುದ್ಧ ಸಾಮಥ್ರ್ಯವನ್ನು ಹೆಚ್ಚಿಸಲು 130 ಶತಕೋಟಿ ಖರ್ಚು ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಸೇನೆಯ ಆದ್ಯತೆಗೆ ಸಂಬಂಧಿಸಿದಂತೆ ಕಾಲಾಳುಪಡೆಗಳನ್ನು ಆಧುನೀಕರಣಗೊಳಿಸುವುದು, 2,600 ಕಾಲಾಳು ಯುದ್ಧ ವಾಹನಗಳನ್ನು ಸಂಗ್ರಹಿಸುವುದು ಮತ್ತು 1,700 ಭವಿಷ್ಯದ ಯುದ್ಧ ವಿಮಾನಗಳನ್ನು ಸಂಗ್ರಹಿಸುವುದು ಒಳಗೊಂಡಿದೆ. ವಾಯುಪಡೆಗೆ ಸಂಬಂಧಿಸಿದಂತೆ, 110 ಹಲವು ಕಾರ್ಯಗಳನ್ನು ಮಾಡಬಲ್ಲ ಯುದ್ಧ ವಿಮಾನಗಳನ್ನು ಸಂಗ್ರಹಿಸುವುದು ಸೇರಿಕೊಂಡಿದೆ. ಸೇನಾಪಡೆಯನ್ನು ಪ್ರತಿ ಹಂತದಲ್ಲಿ ಸಜ್ಜುಗೊಳಿಸುವ ಯೋಜನೆಯಿದೆ. ನೌಕಾಪಡೆಯು ಪ್ರತಿ ಹಂತಗಳಾದ ನೀರಿನ ಮೇಲೆ, ನೀರಿನಡಿಯಲ್ಲಿ ಮತ್ತು ಆಕಾಶದಲ್ಲಿ ಯುದ್ಧ ಮಾಡಲು ಸಿದ್ಧಗೊಳಿಸಲಾಗುತ್ತದೆ.

ನೌಕಾ ಪಡೆಗೆ 200 ಹಡಗುಗಳು, 500 ಯುದ್ಧ ವಿಮಾನಗಳು ಮತ್ತು 24 ಯುದ್ಧ ಮಾಡುವ ಜಲಂತರ್ಗಾಮಿಯನ್ನು ಮುಂದಿನ 3ರಿಂದ 4 ವರ್ಷಗಳಲ್ಲಿ ಸೇರಿಸಲು ತೀರ್ಮಾನಿಸಲಾಗಿದೆ. ಪ್ರಸ್ತುತ ಭಾರತೀಯ ನೌಕಾ ಪಡೆಯಲ್ಲಿ ಸುಮಾರು 132 ಹಡಗುಗಳು, 220 ಯುದ್ಧ ವಿಮಾನಗಳು ಮತ್ತು 15 ಜಲಾಂತರ್ಗಾಮಿ ನೌಕೆಗಳಿವೆ.

Facebook Comments