ಮಾತುಕತೆ ವಿಫಲವಾದರೆ ಮಿಲಿಟರಿ ಕಾರ್ಯಾಚರಣೆ : ಚೀನಾಗೆ ರಾವತ್ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.24-ಪೂರ್ವ ಲಡಾಕ್‍ನಲ್ಲಿ ಚೀನಾದೊಂದಿಗೆ ತಲೆದೋರಿರುವ ಗಡಿ ಬಿಕ್ಕಟ್ಟು ಮಾತುಕತೆ ಮೂಲಕ ಇತ್ಯರ್ಥವಾಗದ ಪಕ್ಷದಲ್ಲಿ ಸೇನಾ ಕಾರ್ಯಾಚರಣೆ ಅಂತಿಮ ಆಯ್ಕೆಯಾಗಬಹುದು ಎಂದು ಭಾರತ ಶಸ್ತ್ರಸ್ತ್ರ ಪಡೆಗಳ ಮಹಾದಂಡನಾಯಕ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ಲಡಾಕ್ ವಿಷಯವಾಗಿ ಈಗಾಗಲೇ ಚೀನಾ ಉನ್ನತ ಸೇನೆಯೊಂದಿಗೆ ನಾವು ಐದು ಸುತ್ತುಗಳ ಮಹತ್ವದ ಚರ್ಚೆ ನಡೆಸಿದ್ದೇವೆ. ಇಂಡೋ-ಚೈನಾ ಗಡಿಯಿಂದ ತನ್ನ ಪೀಪಲ್ಸ್ ಆಫ್ ಲಿಬರೇಷನ್ ಆರ್ಮಿ(ಪಿಎಲ್‍ಎ)ಯನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಹೇಳಿದೆ. ಅದಕ್ಕೆ ಚೀನಾ ಸಂಪೂರ್ಣ ಬದ್ದವಾಗಿರಬೇಕೆಂದು ಎಂದು ಹೇಳಿದ್ದಾರೆ.

ಇನ್ನು ಪ್ರಮುಖ ಹಂತದ ಮಾತುಕತೆ ಇನ್ನು ನಡೆಯಬೇಕಿದೆ. ಚೀನಾ ಜೊತೆ ಕಮಾಂಡರ್ ಮಟ್ಟದ ಮಾತುಕತೆ ಫಲಪ್ರದವಾಗುವ ವಿಶ್ವಾಸವಿದೆ. ಒಂದು ವೇಳೆ ಮಾತುಕತೆ ವಿಫಲವಾದಲ್ಲಿ ಸೇನಾ ಕಾರ್ಯಾಚರಣೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಚೀನಾಗೆ ಅವರು ಗಂಭೀರ ಎಚ್ಚರಿಕೆ ನೀಡಿದರು.

ಪಿಎಲ್‍ಎ ಸೇನೆಯನ್ನು ಎದುರಿಸಲು ನಮ್ಮ ಮೂರು ಶಸ್ತ್ರ ಪಡೆಗಳು ಸರ್ವಸನ್ನದ್ದವಾಗಿವೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಭೂಸೇನೆ, ನೌಕಾಪಡೆ ಮತ್ತು ವಾಯುದಳದ ಮಹಾಮುಖ್ಯಸ್ಥರಾದ ಜನರಲ್ ರಾವತ್ ಸ್ಪಷ್ಟ ಮಾತುಗಳಲ್ಲಿ ಪುನರುಚ್ಚರಿಸಿದರು.

2017ರಲ್ಲಿ ಈಶಾನ್ಯ ಭಾರತದ ಡೋಕ್ಲಾಮ್‍ನಲ್ಲಿ ಚೀನಾದೊಂದಿಗೆ ಉದ್ಭವಿಸಿದ್ದ 73 ದಿನಗಳ ಗಂಭೀರ ಗಡಿ ಬಿಕ್ಕಟ್ಟು ಸಂದರ್ಭದಲ್ಲಿ ಜನರಲ್ ಬಿಪಿನ್ ರಾವತ್ ಭೂಸೇನೆ ಮುಖ್ಯಸ್ಥರಾಗಿದ್ದರು.

ಆಗ ಅವರು ಭಾರತದ ಗುಪ್ತಚರ ವರದಿಯಲ್ಲಿನ ಲೋಪದೋಷಗಳ ಬಗ್ಗೆ ಮುನ್ನವೇ ತಿಳಿಸಿದ್ದರು. ಚೀನಾ ಪಿಎಲ್‍ಎ ಸೇನೆ ಜೊತೆ ಭಾರತೀಯ ಸೇನೆಯನ್ನು ರಣರಂಗಕ್ಕಿಳಿಸಲು ಜನರಲ್ ರಾವತ್ ಸಕಲ ರೀತಿಯಲ್ಲೂ ಸಜ್ಜಾಗಿದ್ದರು.

ಆದರೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಮಾತುಕತೆ ಫಲಶೃತಿಯಾಗಿ ಡೊಕ್ಲಾಮ್‍ನಲ್ಲಿ ಕದನ ಕಾರ್ಮೋಡ ತಿಳಿಯಾಗಿ ಗಡಿಬಿಕ್ಕಟ್ಟು ಇತ್ಯರ್ಥವಾಗಿತ್ತು.

Facebook Comments

Sri Raghav

Admin