ಮಾರ್ಷಲ್‍ಗಳಿಗೆ ಸೇನೆ ಶೈಲಿ ಸಮವಸ್ತ್ರ ಜಾರಿ ಕುರಿತು ಮರು ಪರಿಶೀಲನೆಗೆ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.19 (ಪಿಟಿಐ)- ರಾಜ್ಯಸಭೆಯ ಮಾರ್ಷಲ್‍ಗಳಿಗೆ ಸೇನಾ ಶೈಲಿಯ ಹೊಸ ಸಮವಸ್ತ್ರದ ಜಾರಿ ಉದ್ದೇಶದ ಬಗ್ಗೆ ವ್ಯಾಪಕ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಇದರ ಮರು ಪರಾಮರ್ಶೆಗೆ ಸಂಸತ್ತಿನ ಮೇಲ್ಮನೆ ಸಭಾಪತಿ ಡಾ.. ಎಂ. ವೆಂಕಯ್ಯ ನಾಯ್ಡು ಇಂದು ಆದೇಶ ನೀಡಿದ್ದಾರೆ.

ಮಾರ್ಷಲ್‍ಗಳಿಗೆ ಮಿಲಿಟರಿ ಶೈಲಿಯ ಹೊಸ ಯೂನಿಫಾರಂ ನೀಡಬೇಕೆಂಬ ರಾಜ್ಯಸಭೆ ಕಾರ್ಯಾಲಯದ ಪ್ರಸ್ತಾವನೆಗೆ ಭಾರತೀಯ ಸೇನೆ ಸೇರಿದಂತೆ ಸಂಸದರು ಮತ್ತು ಸಾರ್ವಜನಿಕರಿಂದಲೂ ವ್ಯಾಪಕ ಆಕ್ಷೇಪಗಳು ವ್ಯಕ್ತವಾದ ಹಿನ್ನಲೆಯಲ್ಲಿ ಈ ಬಗ್ಗೆ ಮರು ಪರಿಶೀಲನೆಗೆ ಆದೇಶಿಸಲಾಗಿದೆ. ಈ ಕುರಿತು ಮೇಲ್ಮನೆಯಲ್ಲಿ ಇಂದು ಹೇಳಿಕೆ ನೀಡಿದ ಸಭಾಪತಿ ವೆಂಕಯ್ಯ ನಾಯ್ಡು ಅವರು, ರಾಜ್ಯಸಭೆಯ ಕಾರ್ಯಾಲಯವು ಈ ನಿರ್ಧಾರವನ್ನು ಮರು ಪರಾಮರ್ಶಿಸಲಿದೆ ಎಂದರು.

ಮಾರ್ಷಲ್‍ಗಳಿಗೆ ಈಗಿರುವ ರೂಢಿಗತ ಸಮವಸ್ತ್ರ ಮತ್ತು ರುಮಾಲು ಬದಲು ಅವರಿಗೆ ಮಿಲಿಟರಿ ಶೈಲಿಯ ಸಮವಸ್ತ್ರ ನೀಡಲು ನಿರ್ಧರಿಸಲಾಗಿತ್ತು. ಆದರೆ ಭಾರತೀಯ ಸೇನೆ. ರಾಜಕೀಯ ವಲಯ ಮತ್ತು ಸಾರ್ವಜನಿಕರಿಂದ ಈ ಬಗ್ಗೆ ಕೆಲವು ಆಕ್ಷೇಪಣೆಗಳು ಬಂದಿವೆ. ಹೀಗಾಗಿ ಇದನ್ನು ಮರು ಪರಿಶೀಲಿಸಲು ಆದೇಶಿಸಲಾಗಿದೆ ಎಂದು ಅವರು ಹೇಳಿದರು.

Facebook Comments