‘ಮಿಲ್ಕಾ ಸಿಂಗ್ ನನಗೆ ತಂದೆ ಮಾತ್ರವಲ್ಲ ಮಾರ್ಗದರ್ಶಕರೂ ಹೌದು’

ಈ ಸುದ್ದಿಯನ್ನು ಶೇರ್ ಮಾಡಿ

ಚಂಡಿಗಢ್,ಜೂ.21-ಮಿಲ್ಕಾಸಿಂಗ್ ನನಗೆ ತಂದೆ ಮಾತ್ರವಲ್ಲದೆ ಅತ್ಯುತ್ತಮ ಸ್ನೇಹಿತ, ಮಾರ್ಗದರ್ಶಕರಾಗಿದ್ದರೂ ಎಂದು ಅವರ ಪುತ್ರ ಹಾಗೂ ಗಾಲ್ಫ್ ಆಟಗಾರ ಜೀವ್‍ಮಿಲ್ಕಾಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಸ್ವಾತಂತ್ರ ಭಾರತದ ಪ್ರಪ್ರಥಮ ಕ್ರಿಡಾಪಟು ಹಾಗೂ ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಕಾಸಿಂಗ್ ಕೊರೊನಾ ಮಹಾಮಾರಿ ಸೋಂಕಿಗೆ ಬಲಿಯಾಗಿದ್ದರು. ಫಾದರ್ಸ್ ಡೇ ಯಂದು ತಮ್ಮ ತಂದೆಯನ್ನು ಸ್ಮರಿಸಿಕೊಂಡಿರುವ ಜೀವ್ ಅವರು ಟ್ವಟ್ ಮೂಲಕ ತಮ್ಮ ಮನದಾಳದ ಮಾತನ್ನು ತಿಳಿಸಿದ್ದಾರೆ.

ನಾನು ನನ್ನ ತಂದೆಯಂತೆ ಎಲ್ಲಾ ವಿಲಕ್ಷಣಗಳನ್ನು ಗೆಲ್ಲುವ ಸ್ಥಿತಿಸ್ಥಾಪಕತ್ವ ಹಾಗೂ ಆಂತರಿಕ ಶಕ್ತಿಯನ್ನು ಹೊಂದಿದ್ದೇನೆ ಎಂದು ಭಾವಿಸುತ್ತೇನೆ. ನಮ್ಮ ತಂದೆಯಾದ ಕೊಡುಗೆಯಾಗಿ ಬಂದಿರುವ ಅಂತಹ ಧಿಶಕ್ತಿಯನ್ನು ತನ್ನ ಜೀವಮಾನ ಪೂರ್ತಿ ಬಳಸಿಕೊಳ್ಳುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.

Facebook Comments

Sri Raghav

Admin