ಉಪಚುನಾವಣೆಯಲ್ಲಿ ಕೋಟ್ಯಾಧಿಪತಿಗಳು..! ಯಾರ ಆಸ್ತಿ ಎಷ್ಟೆಷ್ಟಿದೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.20-ಜಿದ್ದಾಜಿದ್ದಿನ ರಣರಂಗವಾಗಿರುವ ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಈ ಬಾರಿ ಕೋಟ್ಯಾಧಿಪತಿ ಕುಳಗಳು ಸ್ಪರ್ಧಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ರಾಜ್ಯದಲ್ಲೇ ಅತಿ ಶ್ರೀಮಂತ ರಾಜಕಾರಣಿ ಎಂದು ಖ್ಯಾತಿ ಪಡೆದಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್, ವಿಜಯನಗರದ ಆನಂದ್‍ಸಿಂಗ್, ಕೆ.ಆರ್.ಪುರಂ ಭೈರತಿ ಬಸವರಾಜ್, ಗೋಕಾಕ್‍ನ ರಮೇಶ್ ಜಾರಕಿ ಹೊಳಿ, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಸೇರಿದಂತೆ ಹಲವಾರು ಕೋಟ್ಯಾಧಿಪತಿಗಳಿದ್ದಾರೆ.

ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಹೊಸಕೋಟೆಯಲ್ಲಿ ಕಣದಲ್ಲಿರುವ ಎಂ.ಟಿ.ಬಿ.ನಾಗರಾಜ್ ಕಳೆದ ಒಂದು ವರ್ಷದ ಅವಧಿಯಲ್ಲಿ ಅವರ ಆಸ್ತಿ 184 ಕೋಟಿ ಏರಿಕೆಯಾಗಿದೆ. ಉಳಿದಂತೆ ಸ್ಪರ್ಧೆ ಮಾಡಿರುವ ಎಲ್ಲಾ ಅಭ್ಯರ್ಥಿಗಳು ಮತ್ತು ಅವರ ಕುಟುಂಬದವರ ಆದಾಯವು ಗಣನೀಯವಾಗಿ ಪ್ರಮಾಣದಲ್ಲಿ ಏರಿಕೆಯಾಗಿರುವುದು ವಿಶೇಷ. 2018ರ ವಿಧಾನಸಭೆ ಚುನಾವಣೆಯಲ್ಲಿ ಘೋಷಣೆ ಮಾಡಿಕೊಂಡ ಆಸ್ತಿ ವಿವರಕ್ಕೂ, ಈಗ ಘೋಷಿಸಿಕೊಂಡಿರುವ ಆಸ್ತಿಯಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ.

ಅಭ್ಯರ್ಥಿಗಳ ಆಸ್ತಿ ವಿವರ:
ಎಂಟಿಬಿ ನಾಗರಾಜ್– ಒಟ್ಟು ಆಸ್ತಿ 1223 ಕೋಟಿ ರೂ., ವಿದ್ಯಾರ್ಹತೆ : 9ನೇ ತರಗತಿ, ವಾಹನಗಳು- ರೋಲ್ಸ್‍ರಾಯ್, ಬೆಂಜ್, ಲ್ಯಾಂಡ್‍ರೋವರ್, ಫಾಚ್ರ್ಯೂನರ್ ಸೇರಿದಂತೆ 7 ಕಾರು

ಆನಂದ್‍ಸಿಂಗ್-ಒಟ್ಟು ಆಸ್ತಿ 176.58 ಕೋಟಿ ರೂ. , ವಿದ್ಯಾರ್ಹತೆ : ಪಿಯುಸಿ, ವಾಹನಗಳು-ಮರ್ಸಿಡಿಸ್‍ ಬೆಂಜ್, ಬಿಎಂಡಬ್ಲ್ಯು, ಟಯೋಟೋ ಸೇರಿದಂತೆ 19 ಕಾರುಗಳು, ವಜ್ರಾಭರಣ-1.74 ಕೋಟಿ ರೂ.

ಭೈರತಿ ಬಸವರಾಜ್-ಒಟ್ಟು ಆಸ್ತಿ 112.09 ಕೋಟಿ ರೂ., ವಿದ್ಯಾರ್ಹತೆ : ಪಿಯುಸಿ, ವಾಹನಗಳು: 3 ಬೆಂಜ್, ಲ್ಯಾಂಡ್ ರೋವರ್, ಆಡಿ, ಫಾಚ್ರ್ಯೂನರ್ ಸೇರಿದಂತೆ 6 ಕಾರು, 4 ರೋಲೆಕ್ಸ್, 2 ರ್ಯಾಡೋ ವಾಚ್‍ಗಳು

Facebook Comments