ಟ್ರ್ಯಾಕ್ಟರ್ ಏರಿ ಉಳುಮೆ ಮಾಡಿದ ಸಚಿವ ಸಿ.ಟಿ.ರವಿ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು : ಸದಾ ಲವಲವಿಕೆಯಿಂದ ಇರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಇಂದು ಚಿಕ್ಕಮಗಳೂರಿನ ತಮ್ಮ ರಾಮನಹಳ್ಳಿ ಫಾರ್ಮ್ ಹೌಸ್ನಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಸಮಯ ಕಳೆದರು.

ಕೋರೋನಾ ಸೋಂಕಿನಿಂದ ದೇಶದೆಲ್ಲೆಡೆ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಕೋರೋನಾ ಸೋಂಕು ಹರಡದಂತೆ ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳ ಭೇಟಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚಿಸಿದ್ದಾರೆ.

ಕಳೆದ ಒಂದು ವಾರದಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದಾರೆ.

ಇಂದು ಸಚಿವರು ರಿಲಾಕ್ಸ್ ಮೂಡಿನಲ್ಲಿ ತಮ್ಮ ಫಾರ್ಮ್ ಹೌಸ್ ನ ತೆಂಗಿನ ತೋಟದ ಸುತ್ತ ಎರಡು ಎಕರೆ ಜಾಗದಲ್ಲಿ ತಾವೇ ಉಳುಮೆ ಮಾಡುವ ಮೂಲಕ ಕೆಲಸಗಾರರ ಜೊತೆ ಕೈಜೋಡಿಸಿದರು.

Facebook Comments

Sri Raghav

Admin