ಒಂದೇ ಸೂರಿನಡಿ ನಾಲ್ಕು ಇಲಾಖೆ ತರಲು ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಆ.18- ರೈತರ ಸಮಗ್ರ ಕೃಷಿಗೆ ಅನುಕೂಲವಾಗುವಂತೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಇಲಾಖೆಗಳನ್ನು ಒಂದೇ ಖಾತೆಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದರು.

ನರಸಿಂಹರಾಜಪುರ ತಾಲ್ಲೂಕಿನ ದೀಪ್ತಿ ಸರ್ಕಲ್ ಬಳಿ ನಿರ್ಮಿಸಲಾದ ರೂ. 60 ಲಕ್ಷ ವೆಚ್ಚದ ನೂತನ ಕೃಷಿ ಇಲಾಖೆ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಸರ್ಕಾರ ರೈತರಿಗೆ ಸಮಗ್ರ ಕೃಷಿಗೆ ಉತ್ತೇಜಿಸಲು ಕೃಷಿ, ತೋಟಗಾರಿಕೆ, ಮೀನುಗಾರಿಕೆ , ಪಶುಸಂಗೋಪನೆಯ ಇಲಾಖೆಗಳನ್ನು ವಿಲೀನಗೊಳಿಸಲು ವರದಿ ನೀಡುವಂತೆ ಉಪ ಸಮಿತಿ ರಚಿಸಲಾಗಿದೆ. ರೈತರು ಒಂದೇ ಬೆಳೆ ಬೆಳೆಯಬಾರದು, ಬೆಲೆ ಏರಿಕೆ ಕಂಡಾಗ ಎಲ್ಲರೂ ಅದೇ ಬೆಳೆ ಬೆಳೆಯುತ್ತಾರೆ.

ಪ್ರತಿ ವಿಧದ ಬೆಳೆಗಳನ್ನು ಬೆಳೆದಾಗ , ಬೆಲೆ ಕುಸಿತ ಕಂಡಾಗ ಆರ್ಥಿಕವಾಗಿ ನಷ್ಟವಾಗುವುದಿಲ್ಲ ಉಳಿಸಬೇಕಾಗಿದೆ ಎಂದರು. ಫಸಲ್ ಭೀಮಾ ಯೋಜನೆ ರೈತರಿಗೆ ಮಾರಕವಲ್ಲ ಜಿಲ್ಲೆಯಲ್ಲಿ ಒಟ್ಟು 46,321 ರೈತರು ರೂ. 14 ಕೋಟಿ 66 ಲಕ್ಷಪ್ರೀಮಿಯಂ ಹಣ ಕಟ್ಟಿದ್ದರು ಅವರಿಗೆ 106 ಕೋಟಿ, 6 ಲಕ್ಷ ರೂ ಪರಿಹಾರ ಬಂದಿದೆ.

ಕೃಷಿ ಇಲಾಖೆಯ ಮೂಲಕ 3 ವರ್ಷದಲ್ಲಿ 16,707 ರೈತರು ರೂ. 271 ಕೋಟಿ ಪ್ರೀಮಿಯಂ ಕಟ್ಟಿದ್ದರು. ರೂ. 552 ಕೋಟಿ ಪರಿಹಾರ ಬಂದಿದೆ ಎಂದ ಅವರು ರೈತರ ಪಹಣಿಯಲ್ಲಿ ಬೆಳೆ ಕಾಲಂ ಸರಿಯಾಗಿದ್ದರೆ ಫಸಲು ಭೀಮಾ ಯೋಜನೆ ಒಳ್ಳೆಯ ಯೋಜನೆಯಾಗಲಿದೆ ಎಂದು ತಿಳಿಸಿದರು.

ಅತಿವೃಷ್ಟಿ, ಬರಗಾಲ, ಬೆಲೆ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮಾರುಕಟ್ಟೆ ಆಧಾರಿತ ಬೆಲೆ ನಿಗದಿ ಮಾಡುವುದೇ ಇದಕ್ಕೆ ಪರಿಹಾರವಾಗಲಿದೆ.

ಈಗಾಗಲೇ ಸರ್ಕಾರ 28 ಬೆಳೆಗೆ ಬೆಂಬಲ ಬೆಲೆ ನೀಡುತ್ತಿದ್ದು ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿ ತಂದಿರುವುದು ರೈತ ವಿರೋದಿ ಅಲ್ಲ ಬದಲಾಗಿ ರೈತ ಸ್ನೇಹಿಯಾಗಲಿದೆ ಇಲ್ಲಿ ಯಾರೂ ಬೇಕಾದರೂ ರೈತರ ಮನೆ ಬಾಗಿಲಿಗೆ ಬಂದು ರೈತರ ಬೆಳೆಯನ್ನು ಖರೀದಿ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, 60 ಲಕ್ಷ ರೂ. ವೆಚ್ಚದ ನೂತನ ಕೃಷಿ ಇಲಾಖೆ ಕಟ್ಟಡಕ್ಕೆ ಗೋದಾಮು, ಕಾಂಪೌಂಡು ಸೇರಿ ಇನ್ನೂ 52 ಲಕ್ಷ ಅನುದಾನ ಬೇಕಾಗಬಹುದು. ಸರ್ಕಾರ ಹಣ ಮಂಜೂರು ಮಾಡಿಸಿ ಕೊಡಬೇಕು. ಸರ್ಕಾರಕ್ಕೆ ರೈತರು ಹೆಚ್ಚು ತೆರಿಗೆ ಕಟ್ಟುತ್ತಿದ್ದು ಅವರು ರೈತರ ನೆರವಿಗೆ ಧಾವಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ. ವಿಧಾನ ಪರಿಷತ್ ಸದಸ್ಯ ಪ್ರಾಣೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ಸದಾಶಿವ, ಚಂದ್ರಮ್ಮ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ತಿರುಮಲೇಶ್.ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನೀಲೇಶ್, ಪ್ರಧಾನ ಕಾರ್ಯದರ್ಶಿ ಪ್ರಶಾಂತಶೆಟ್ಟಿ ಉಪಸ್ಥಿತರಿದ್ದರು.

Facebook Comments

Sri Raghav

Admin