ಶಿವಕುಮಾರ ಸ್ವಾಮೀಜಿ- ಬಾಲಗಂಗಾಧರನಾಥ ಶ್ರೀಗಳ ಜನ್ಮಸ್ಥಳ, ಪಾರಂಪರಿಕ ತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಬದ್ಧ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.4- ನಡೆದಾಡುವ ದೇವರೆಂದೇ ವಿಶ್ವಾದ್ಯಂತ ಮನೆಮಾತಾಗಿರುವ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮಿಜಿಯವರ ಜನ್ಮ ಸ್ಥಳವನ್ನು ವಿಶ್ವ ದರ್ಜೆಯ ಪಾರಂಪರಿಕ ತಾಣವನ್ನಾಗಿ ಪರಿವರ್ತಿಸುವ ಯೋಜನೆಗೆ ನಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಸ್ಪಷ್ಟಪಡಿಸಿದ್ದಾರೆ.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಬಗ್ಗೆ ಸಾಮಾಜಿಕ ಜÁಲತಾಣಗಳಲ್ಲಿ ಅನವಶ್ಯಕವಾದ ಹಾಗೂ ಸತ್ಯಕ್ಕೆ ದೂರವಾದ ತಪ್ಪು ಮಾಹಿತಿಯನ್ನು ಸಾರ್ವಜನಿಕರಿಗೆ ಸಂದೇಶ ರವಾನಿಸುತ್ತಿದ್ದಾರೆ. ಇಂತಹ ವದಂತಿಗಳಿಗೆ ಯಾರೊಬ್ಬರೂ ಕಿವಿಗೊಡಬಾರದೆಂದು ಮನವಿ ಮಾಡಿದ್ದಾರೆ.  ನಾನು ಇಬ್ಬರೂ ಶ್ರೀಗಳ ಬಗ್ಗೆ ಅಪಾರವಾದ ಭಕ್ತಿ, ಗೌರವ, ಶ್ರದ್ಧೆಗಳನ್ನು ಇಟ್ಟುಕೊಂಡಿದ್ದೇನೆ.

ಶಿಕ್ಷಣ, ಅನ್ನ, ಅಕ್ಷರ ಸೇರಿದಂತೆ ಎ¯್ಲÁ ಕ್ಷೇತ್ರಗಳಲ್ಲೂ ಸಲ್ಲಿಸಿರುವ ಸೇವೆ ನಾಗರೀಕ ಸಮಾಜಕ್ಕೆ ಮಾದರಿಯಾಗಿದೆ.ಶ್ರೀಗಳ ಜನ್ಮಸ್ಥಳವನ್ನು ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸುವ ಪರಿಕಲ್ಪನೆಯ ಸ್ಪರ್ಶವನ್ನು ನೀಡಿದ್ದು, ನಮ್ಮ ಸರ್ಕಾರದ ಮೂಲಕ ಅದನ್ನು ಸಾಕಾರಗೊಳಿಸಲು ಕಟಿಬದ್ಧರಾಗಿದ್ದೇವೆ ಎಂದು ಪುನರುಚ್ಚರಿಸಿದ್ದಾರೆ.

ಈ ಇಬ್ಬರು ಮಹನೀಯರ ಜನ್ಮಸ್ಥಳವನ್ನು ಕೇವಲ ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸದೆ ಪೂಜ್ಯನೀಯ ಸ್ಥಳವನ್ನಾಗಿ ಅಭಿವೃದ್ಧಿಗೊಳಿಸುವ ವಿಸ್ತೃತ ಕಾರ್ಯಯೋಜನೆ (ಡಿ.ಪಿ.ಆರ್) ಈಗಾಗಲೇ ಸಿದ್ಧಗೊಂಡಿದ್ದು, ನಿರ್ವಹಣಾ ಏಜೆನ್ಸಿಯೊಂದನ್ನು ನಿಗದಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. ಯೋಜನೆಯ ಅನುಷ್ಠಾನವನ್ನು ಕೆ.ಆರ್.ಐ.ಡಿ.ಎಲï. ಸಂಸ್ಥೆಗೆ ನೀಡುವ ವಿಷಯವು ಚರ್ಚೆಗೆ ಬಂದಿದೆ.

ಇದೊಂದು ಪ್ರತಿಷ್ಠಿತ ಯೋಜನೆಯಾಗಿರುವುದರಿಂದ ಈ ಸಂಸ್ಥೆಯಲ್ಲಿ ಇಂತಹ ಯೋಜನೆಯನ್ನು ಅನುಷ್ಠಾನಗೊಳಿಸಲು ನುರಿತ ತಜ್ಞರ ಕೊರತೆ ಇರುವುದು ಹಾಗೂ ಸಂಸ್ಥೆಯು ವಿಧಿಸುವ ಸೆಸ್ ಕೂಡ ಅಧಿಕವಾಗಿರುವುದರಿಂದ ಸದರಿ ಸಂಸ್ಥೆಗೆ ನಿರ್ವಹಣಾ ಕಾರ್ಯವನ್ನು ವಹಿಸಿರುವುದಿಲ್ಲ. ವಿಸ್ತೃತ ಯೋಜನಾ ವರದಿಯನ್ನು ಅನುಮೋದನೆಗಾಗಿ ಕಳೆದ ಜುಲೈ 30ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆರ್ಥಿಕ ಇಲಾಖೆಯ ಮೂಲಕ ಸಲ್ಲಿಸಲಾಗಿದೆ. ಎಂದು ಹೇಳಿದ್ದಾರೆ.

2019-20ನೇ ಸಾಲಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 50 ಕೋಟಿ ರೂ.ಗಳಲ್ಲಿ ಮಹನೀಯರ ಜನ್ಮಸ್ಥಳವನ್ನು ತಲಾ 25 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಘೋಷಿಸಲಾಗಿತ್ತು.  ಈ ಕಾರ್ಯವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೂಲಕ ನಿರ್ವಹಿಸಲು ಉದ್ದೇಶಿಸಿದ್ದರಿಂದ ಕನ್ನಡ ಮತ್ತು ಸಂಸ್ಕøತಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿ ಜಿಲ್ಲಾಧಿಕಾರಿಗಳು, ಇಲಾಖಾ ಕಾರ್ಯದರ್ಶಿ/ನಿರ್ದೇಶಕರು ಇವರೊಂದಿಗೆ ನಾಲ್ಕೈದು ಬಾರಿ ಸಭೆ ನಡೆಸುವುದರ ಜೊತೆಗೆ ಆದಿಚುಂಚನಗಿರಿ ಮಠ ಹಾಗು ಸಿದ್ದಗಂಗಾ ಮಠದ ಶ್ರೀಗಳೊಂದಿಗೆ ಚರ್ಚಿಸಿ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಯೋಜನೆಯ ವಿಸ್ತೃತ ವರದಿಯ ಪ್ರಾತ್ಯಕ್ಷಿಕೆಯನ್ನು 2 ಬಾರಿ ಪ್ರದರ್ಶಿಸಿ ಚರ್ಚೆ ನಡೆಸಿ ಅವರುಗಳಿಂದ ಬಂದ ಸಲಹೆಗಳನ್ನು ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ.

ಈಗಾಗಲೇ ಇಲಾಖೆಯ ಮೂಲಕ ವಿವರವಾದ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಮಹನೀಯರ ಸ್ಮಾರಕಗಳನ್ನು ಕೇವಲ ತಲಾ 25 ಕೋಟಿ ರೂ. ವೆಚ್ಚಕ್ಕೆ ಸೀಮಿತಗೊಳಿಸದೆ ಸರ್ವ ರೀತಿಯಲ್ಲಿಯೂ ಪಾರಂಪರಿಕ ತಾಣವನ್ನಾಗಿ ನಿರ್ಮಿಸಲು ಅವಶ್ಯವಿರುವ ಅನುದಾನವನ್ನು ಒದಗಿಸುವಂತೆ ಮುಖ್ಯ ಮಂತ್ರಿಯವರಿಗೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆಗಾಗಿ ಸರ್ಕಾರದಿಂದ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ.ಈ ಸಮಿತಿಗೆ ತಾಂತ್ರಿಕ e್ಞÁನ ಹಾಗೂ ಶ್ರೀಕ್ಷೇತ್ರಗಳ ಬಗ್ಗೆ ಸಂಪೂರ್ಣ ತಿಳುವಳಿಕೆಯುಳ್ಳ ಇಬ್ಬರು ಸದಸ್ಯರ ಹೆಸರನ್ನು ಸೂಚಿಸುವಂತೆ ಎರಡೂ ಮಠಗಳ ಮಠಾಧ್ಯಕ್ಷರನ್ನು ಕೋರಲಾಗಿದೆ ಎಂದು ಸಚಿವ ರವಿ ಅವರು ಸ್ಪಷ್ಟಪಡಿಸಿದ್ದಾರೆ.
ಮಠದ ಮಾರ್ಗದರ್ಶನದಲ್ಲಿ ಹಾಗೂ ಸರ್ಕಾರದ ಸಮಿತಿಯ ಮೇಲ್ವಿಚಾರಣೆಯಲ್ಲಿ ಯೋಜನೆಯ ಕಾಮಗಾರಿಗಳು ನಡೆಯಲಿದ್ದು, ಯಾವುದೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶಕೊಡುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪುನರುಚ್ಚರಿಸಿದ್ದಾರೆ.

Facebook Comments