ಅರ್ಥಪೂರ್ಣವಾಗಿ ಸಿಎಂ ಹುಟ್ಟುಹಬ್ಬ ಆಚರಿಸಿದ ಸಚಿವ ಗೋಪಾಲಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.27- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 79ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ವಿವಿಧ ಸಾಮಾಜಿಕ ಸೇವೆ ಕೈಗೊಳ್ಳುವ ಮೂಲಕ ಅರ್ಥಪೂರ್ಣವಾಗಿ ಸಿಎಂ ಅವರ ಹುಟ್ಟಹಬ್ಬವನ್ನು ಆಚರಿಸಿದರು. ಮಹಾಲಕ್ಷ್ಮೀ ಎಜುಕೇಶನಲ್ ಟ್ರಸ್ಟ್ ಮಹಾಲಕ್ಷ್ಮೀ ಲೇಔಟ್‍ನ ನಾಗಪುರ ವಾರ್ಡ್‍ನಲ್ಲಿರುವ ಶಾಸಕರ ಭವನದಲ್ಲಿ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ಅವರು ವಿಕಲಚೇತನರೊಂದಿಗೆ ಸೇರಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿದರು.

ಇದೇ ವೇಳೆ ಉಚಿತ ಆರೋಗ್ಯ ತಪಾಸಣಾ ಶಿಬಿರ , ವಿಕಲಚೇತನರಿಗೆ ತ್ರೀ ಚಕ್ರ ವಾಹನ , ವೃದ್ಧಾಪ್ಯ ವೇತನ, ಭಾಗ್ಯ ಲಕ್ಷ್ಮಿ ಬಾಂಡ್ ವಿತರಣೆ, ಮನೆ ಮನೆಗೆ ಗ್ಯಾಸ್ ಸಿಲಿಂಡರ್ ವಿತರಿಸುವ ವಿತರಿಕರಿಗೆ ಸಮವಸ್ತ್ರ ವಿತರಣೆ ಸೇರಿದಂತೆ ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ಈ ವೇಳೆ ಮಾತನಾಡಿದ ಅವರು, ನಮ್ಮ ಜನಪ್ರಿಯ ನಾಯಕರು ಹಾಗೂ ನಾಡಿನ ಮುಖ್ಯಮಂತ್ರಿ ಬಿ.ಎಸ್/ಯಡಿಯೂರಪ್ಪ ಅವರು ಇಂದು ತಮ್ಮ 79ನೇ ಹುಟ್ಟು ಹಬ್ಬಆಚರಿಸಿಕೊಳ್ಳುತಿದ್ದು, ಅವರಿಗೆ ದೇವರು ಇನ್ನೂ ಹೆಚ್ಚು ಆಯುರಾರೋಗ್ಯ ಆಯಸ್ಸು, ಕರುಣಿಸಲಿ, ಇನ್ನೂ ಹೆಚ್ಚಿನ ಜನರ ಸೇವೆ ಮಾಡಲು ಶಕ್ತಿ ನೀಡಲಿ ಎಂದು ಶುಭಾಷಯ ಕೋರಿದರು.

ನುಡಿದಂತೆ ನಡೆಯುವ ನಾಯಕರೆಂದರೆ ಅದು ನಮ್ಮ ಯಡಿಯೂರಪ್ಪನವರು. ಮೊದಲ ಮುಂಚೂಣಿಯಲ್ಲಿರುವ ನಾಯಕರು. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಇಂದು ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರವನ್ನು ಅಕಾರಕ್ಕೆ ತಂದಂತಹ ಮೊದಲ ೀಮಂತ ನಾಯಕರೆಂದರೆ ಅದು ನಮ್ಮ ಯಡಿಯೂರಪ್ಪನವರು, ಇವರ ಮಾರ್ಗದರ್ಶನದಲ್ಲಿ ನಾವು ಕೂಡ ಪಕ್ಷ ಸಂಘಟನೆ ಹಾಗೂ ಅಭಿವೃದ್ಧಿ ಕೆಲಸಗಳಲ್ಲಿ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ನರೇಂದ್ರಬಾಬು ಅವರ ಹುಟ್ಟುಹಬ್ಬಕ್ಕೂ ಸಚಿವರು ಶುಭಾಶಯ ಕೋರಿದರು. ಮಾಜಿ ಪಾಲಿಕೆ ಉಪಮಹಾಪೌರ ರಾದ ಹೇಮಲತಾ ಗೋಪಾಲಯ್ಯ, ಎಸ್.ಹರೀಶ್, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎನ್.ಜಯರಾಂ, ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಬಿಬಿಎಂಪಿ ಕಾರ್ಪೊರೇಟರ್ ರಾಜೇಂದ್ರಕುಮಾರ್, ಪದ್ಮಾವತಿ ಶ್ರೀನಿವಾಸ್, ನಾಗರತ್ನ ಲೋಕೇಶ್ ಸೇರಿದಂತೆ ಕ್ಷೇತ್ರದ ಹಲವು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Facebook Comments

Sri Raghav

Admin