ಕುಡಿತ ಬಿಡಿ, ಉಳಿತಾಯ ಮಾಡಿ : ಚಾಲಕರಿಗೆ ಸಚಿವ ಗೋಪಾಲಯ್ಯ ಕಿವಿಮಾತು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.4-ಕುಡಿತದ ಚಟ ಬಿಟ್ಟು ತಮ್ಮ ಕುಟುಂಬವನ್ನು ನೋಡಿಕೊಳ್ಳಿ. ಇಡೀ ರಾಜ್ಯದಲ್ಲಿ ಮಹಾಲಕ್ಷ್ಮಿ ಲೇ ಔಟ್‍ನಲ್ಲಿರುವ ಆಟೋ ಚಾಲಕರು ಭವಿಷ್ಯ ರೂಪಿಸಿಕೊಳ್ಳಲು ನಾನು ಸದಾ ನಿಮ್ಮ ನೆರವಿಗೆ ಇದ್ದೇನೆ ಎಂದು ಆಹಾರ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಗೋಪಾಲಯ್ಯ ಇಂದಿಲ್ಲಿ ತಿಳಿಸಿದರು.  ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡ್ ನಲ್ಲಿರುವ ಶಾಸಕರ ಭವನದಲ್ಲಿ ಇಂದು ಮಹಾಲಕ್ಷ್ಮಿ ಎಜುಕೇಷನ್ ಟ್ರೇಸ್ಟ್ ಹಾಗೂ ಬಿಜೆಪಿ ಮಂಡಲ ವತಿಯಿಂದ ಕ್ಷೇತ್ರದ 1500 ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿ ನಂತರ ಅವರು ಮಾತನಾಡಿದರು.

ಕೊಟ್ಟ ಮಾತಿನಂತೆ ಆಟೋ ಚಾಲಕರಿಗೆ ಎರಡು ಜೊತೆ ಸಮವಸ್ತ್ರ ನೀಡಿದ್ದೇನೆ. ನೀವು ಬೆಂಗಳೂರು ಮಹಾನಗರ ಹಾಗೂ ರಾಜ್ಯದ ಹಿರಿಮೆ ಹೆಚ್ಚಿಸಲು ಇಡೀ ರಾಜ್ಯಕ್ಕೆ ನೀವು ಮಾದರಿಯಾಗಬೇಕು. ಪ್ರತಿ ಚಾಲಕರು ಪ್ರತಿ ವಾರಕ್ಕೆ 100 ರೂಪಾಯಿಯಂತೆ ಸೇರಿಸಿದರೆ ಅದು ದೊಡ್ಡ ಮೊತ್ತವಾಗಿ ಪರಿವರ್ತನೆ ಆಗುತ್ತದೆ. ಆಗ ನೀವು ನಿಮ್ಮ ಕುಟುಂಬ ಯಾರು ಹತ್ತಿರ ಹೋಗಿ ಕೈ ಚಾಚುವಂತಹ ಪರಿಸ್ಥಿತಿ ಬರುವುದಿಲ್ಲ.

ಸ್ವಂತ ಬಲದ ಮೇಲೆ ಜೀವನ ಸಾಗಿಸಲು ನಿಮ್ಮ ಸಂಘದ ವತಿಯಿಂದ ಎಷ್ಟು ಉಳಿತಾಯ ಮಾಡುತ್ತೀರೋ ಅದಕ್ಕೆ ನಾನು ಪ್ರತಿ ವರ್ಷ 1 ಲಕ್ಷ ರೂ. ಸಹಾಯ ಧನ ನೀಡುತ್ತೇನೆ ಎಂದು ಘೋಷಿಸಿದರು. ನೆರೆದಿದ್ದ ಚಾಲಕರು ಚಪ್ಪಾಳೆ ತಟ್ಟಿ ಬೆಂಬಲ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಮಾತನಾಡಿ , ಇಡೀ ರಾಜ್ಯದಲ್ಲೇ 224 ಕ್ಷೇತ್ರದಲ್ಲಿ ಮಾದರಿ ಶಾಸಕರು ಯಾರು ಎಂದು ನೋಡಿದರೆ ಗೋಪಾಲಯ್ಯ ಅವರು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಸದಾ ಅವರು ಜನರ ಮುಂದೆಯೇ ಇದ್ದು , ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾರೆ. ಕ್ಷೇತ್ರದ ಜನರು ಕೂಡ ಸ್ವಾವಲಂಬಿ ಬದುಕಿನತ್ತ ಚಿತ್ತ ಹರಿಸಿ ಸುಭದ್ರ , ಸುಶಿಕ್ಷಿತ ರಾಜ್ಯ ಕಟ್ಟಲು ನೆರವಾಗಬೇಕು ಎಂದರು.

ಇಂದು ನಡೆಯುತ್ತಿರುವುದು ಪುಣ್ಯದ ಕೆಲಸ. ಆಟೋ ಚಾಲಕರು ಕುಡಿತದ ಚಟಕ್ಕೆ ಬೀಳುತ್ತಾರೆ. ಇದನ್ನು ನೀವು ತ್ಯಜಿಸಿದರೆ ಸಂಸಾರ ಹಸನಾಗುತ್ತದೆ. ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ದಯ ಮಾಡಿ ನನ್ನ ವಿನಂತಿಯನ್ನು ಸ್ವೀಕರಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾಲಕ್ಷ್ಮಿ ಎಜುಕೇಶನಲ್ ಟ್ರೇಸ್ಟ್ ಅಧ್ಯಕ್ಷ ರು ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಎನ್.ಜಯರಾಮï, ಬಿಬಿಎಂಪಿ ಮಾಜಿ ಉಪ ಮಹಾಪೌರ ಎಸ್.ಹರೀಶ್, ಬಿಜೆಪಿ ಮುಖಂಡರಾದ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಬೆಂಗಳೂರು ನಗರ ಬಿಜೆಪಿ ಮುಖಂಡ ಆನಂದ್ ಸೇರಿದಂತೆ ಕ್ಷೇತ್ರದ ಬಿಜೆಪಿ ಪಕ್ಷದ ಎಲ್ಲಾ ಮೋರ್ಚಾದ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಆಟೋ ಚಾಲಕರು ಉಪಸ್ಥಿತರಿದ್ದರು.

Facebook Comments