ಗೋಪಾಲಯ್ಯರ ಖಾತೆ ಬದಲಿಸಬೇಡಿ : ಸರ್ಕಾರಿ ಪಡಿತರ ವಿತರಕರ ಸಂಘ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.21- ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಹೊಂದಿದ್ದ ಸಚಿವ ಗೋಪಾಲಯ್ಯನವರ ಖಾತೆ ಬದಲಾವಣೆ ಮಾಡದಿರುವಂತೆ ಕರ್ನಾಟಕ ರಾಜ್ಯ ಸಹಕಾರಿ ಪಡಿತರ ವಿತರಕರ ಸಂಘ ಒತ್ತಾಯಿಸಿದೆ. ದೇಶಾದ್ಯಂತ ಮಾರಕ ಕೊರೊನಾ ಹರಡಿದ್ದ ಸಂದರ್ಭದಲ್ಲಿ ಆಹಾರ ಸಚಿವರಾದ ಗೋಪಾಲಯ್ಯ ಅವರು ಪಡಿತರ ಚೀಟಿದಾರರಿಗೆ ದೇಶದಲ್ಲೇ ಮಾದರಿಯಾಗುವ ರೀತಿಯಲ್ಲಿ ಆಹಾರ ಪದಾರ್ಥಗಳನ್ನು ವಿತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಹವರ ಖಾತೆ ಬದಲಾವಣೆ ಮಾಡಿರುವುದು ಬೇಸರ ಮೂಡಿಸಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಹೇಳಿದ್ದಾರೆ.

ಈ ಇಲಾಖೆಯಲ್ಲಿ ಕಾರ್ಯನಿರ್ವಹಿಸುವಾಗ ಬೆಳಗ್ಗೆಯಿಂದ ರಾತ್ರಿವರೆಗೆ ಬಡ ಪಡಿತರ ಚೀಟಿದಾರರು ತಮ್ಮ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರೆ ತಕ್ಷಣ ಅವರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ಜನಪರ ನಾಯಕರಾದ ಇವರು ಜನಸಾಮಾನ್ಯರ ಕುಂದು-ಕೊರತೆಗಳನ್ನು ನೀಗಿಸಿ ಅತ್ಯುತ್ತಮ ಯೋಜನೆಗಳನ್ನು ನೀಡಿ ಸರ್ಕಾರಕ್ಕೆ ಒಳ್ಳೆಯ ಹೆಸರು ತರಲು ಶ್ರಮಿಸಿದ್ದಾರೆ.  ಇಂತಹವರ ಖಾತೆ ಬದಲಾವಣೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Facebook Comments