ರಾಹುಕಾಲ ಮುಗಿಯುವವರೆಗೆ ಕಾರಿನಿಂದ ಕೆಳಗಿಳಿಯದ ರೇವಣ್ಣ..!

ಈ ಸುದ್ದಿಯನ್ನು ಶೇರ್ ಮಾಡಿ

hd Revannaಬೆಳಗಾವಿ,ಡಿ.14- ಪ್ರತೀ ಕಾರ್ಯಕ್ಕೂ ರಾಹುಕಾಲ ಗುಳಿಕ ಕಾಲ ನೋಡುವ ಸಚಿವ ರೇವಣ್ಣ  ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು ಇಂದು ಇಲ್ಲಿ ಮತ್ತೆ ರಾಹುಕಾಲ ನೋಡಿ ವಾಹನದಿಂದ ಕೆಳಗಿಳಿದು ಅಲ್ಲಿದ್ದವರ ಅಚ್ಚರಿಗೆ ಕಾರಣರಾಗಿದ್ದಾರೆ. ನಗರದ ಕೆಶಿಪ್ ಅವತಿಯಿಂದ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಭಾಗವಹಿಸಲು ರೇವಣ್ಣ ಅವರು ರಾಹುಕಾಲ ವೀಕ್ಷಿಸಿದ್ದಾರೆ. ಕಾರ್ಯಕ್ರಮ ಸ್ಥಳಕ್ಕೆ ಅವರು ಬಂದರೂ ವಾಹನದಿಂದ ಇಳಿಯಲಿಲ್ಲ. ರಾಹುಕಾಲ ಮುಗಿದ ಬಳಿಕವೇ ವಾಹನದಿಂದ ಇಳಿದಿದ್ದಾರೆ.

ಅವರು ಕಾರ್ಯಕ್ರಮಕ್ಕೆ 9.40ಕ್ಕೆ ಆಗಮಿಸಿದ್ದರು. ಆದರೆ ರಾಹುಕಾಲ ಇದ್ದ ಕಾರಣ ಅವರು 9.54 ನಿಮಿಷಕ್ಕೆ ವಾಹನದಿಂದ ಇಳಿದಿದ್ದಾರೆ. ಬೆಳಗ್ಗೆ 10 ಗಂಟೆಗೆ ಕೆಶಿಪ್ ಅವತಿಯಿಂದ ರಸ್ತೆ ಸುರಕ್ಷತಾ ಅಭಿಯಾನ ಉದ್ಘಾಟನೆ ಆಗಬೇಕಿತ್ತು. ಸರಿಯಾದ ಸಮಯಕ್ಕೆ ಸಿಎಂ ಕುಮಾರಸ್ವಾಮಿ ಬಾರದ ಕಾರಣ ಸಚಿವ ಎಚ್.ಡಿ. ರೇವಣ್ಣ ಅಭಿಯಾನ ಪ್ರಾತ್ಯಕ್ಷಿಕೆ ನೋಡಿ ಸದನಕ್ಕೆ ಮರಳಿದ್ದಾರೆ.

Facebook Comments