ಕೋವಿಡ್ ನಿರ್ವಹಣೆಯಲ್ಲಿ ಟಾಪ್-5 ನಗರಗಲ್ಲಿ ಬೆಂಗಳೂರು ಬೆಸ್ಟ್: ಸಚಿವ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.26- ಕೋವಿಡ್ ನಿರ್ವಹಣೆಯಲ್ಲಿ ರಾಜಧಾನಿ ಬೆಂಗಳೂರು ಅಸಾಧಾರಣ ಸಾಧನೆ ತೋರುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಜೂನ್ 25ರಂತೆ ಭಾರತದ ಐದು ದೊಡ್ಡ ಜನಸಂಖ್ಯಾ ನಗರಗಳಲ್ಲಿ 1,92,500 ಕೋವಿಡ್ ಪ್ರಕರಣಗಳು ಹಾಗೂ 7417 ಸಾವು ಸಂಭವಿಸಿವೆ.

ಬೆಂಗಳೂರಿನಲ್ಲಿ 1798 ಪ್ರಕರಣಗಳು ಮತ್ತು 78 ಸಾವು ಸಂಭವಿಸಿವೆ. ಒಟ್ಟು ಟಾಪ್-5 ನಗರಗಳ ಪ್ರಕರಣಗಳಿಗೆ ಹೋಲಿಸಿದರೆ ಶೇ.0.9ರಷ್ಟು ಮತ್ತು ಶೇ.1ರಷ್ಟು ಸಾವು ಸಂಭವಿಸಿದೆ ಎಂದು ಹೇಳಿದರು. ಕೊರೊನಾ ನಿಯಂತ್ರಣದಲ್ಲಿ ಬೆಂಗಳೂರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಸುಧಾಕರ್ ತಿಳಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಗ್ರಾಫ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ನಗರದ ಜನ ತೀವ್ರ ಆತಂಕಕ್ಕೊಳಗಾಗಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್‍ಗಳು ಸಿಗುತ್ತಿಲ್ಲ. ಕೆಲವೆಡೆ ಕೊರೊನಾ ಸೋಂಕಿತರು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ವರದಿಯಾಗಿವೆ.

ಈ ಎಲ್ಲದರ ನಡುವೆಯೂ ಬೇರೆ ನಗರಗಳಿಗೆ ಹೋಲಿಸಿದರೆ ಸಿಲಿಕಾನ್ ಸಿಟಿಯಲ್ಲಿ ಕೋವಿಡ್-19 ಸೋಂಕು ಹರಡುವ ಮತ್ತು ಸಾವಿನ ಪ್ರಮಾಣ ನಿಯಂತ್ರಣದಲ್ಲಿದೆ.

Facebook Comments