ಶಾಸಕರ ಆಣೆ ಪ್ರಮಾಣ ಪ್ರಹಸನ ಬೇಸರ ತಂದಿದೆ : ಸಚಿವ ಮಾಧುಸ್ವಾಮಿ
ಹಾಸನ; ರಾಜ್ಯ ರಾಜಕೀಯ ವಲಯದಲ್ಲಿ ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿರೊ ಸಾ.ರಾ.ಮಹೇಶ್ ಹಾಗೂ ವಿಶ್ವನಾಥ್ ನಡುವಿನ ಆಣೆ ಪ್ರಮಾಣ ಪ್ರಹಸನ ಬೇಸರ ತಂದಿದೆ ಎಂದು ಕಾನೂನು ಮತ್ತು ಸಂಸದೀಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಹಾಸನಾಂಭ ದೇವಾಲಯ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಬ್ಬರು ಶಾಸಕರ ನಡುವಿನ ಜಗಳ ನಾಡಿನ ಜನತೆಯ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ ಅಲ್ಲದೆ ಮಾಧ್ಯಮದವರೇ ಇದಕ್ಕೆ ಹೆಚ್ಚು ಪ್ರಚಾರ ನೀಡಿದ್ದೀರಿ ಮತ್ತೆ ಆ ಕುರಿತು ನೀವೆ ಪ್ರಶ್ನೆ ಕೇಳುತ್ತಿದ್ದೀರ ಎಂದು ಸಚಿವರು ಮರು ಪ್ರಶ್ನೆ ಹಾಕಿದರು.
ಜಿಲ್ಲೆಯ ಹೇಮಾವತಿ ಜಲಾಶಯ ವ್ಯಾಪ್ತಿಯ ಪುನರ್ವಸತಿ ಮಂಜೂರಾತಿಯಲ್ಲಿ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಈ ಬಗ್ಗೆ ಜಿಲ್ಲಾಧಿಕಾರಿ ಗೆ ಸುಚಿಸಲಾಗಿದೆ ಎಂದರು. ಇದೇ ಮೊದಲ ಬಾರಿ ಜಿಲ್ಲೆಯ ಶಕ್ತಿ ದೇವತೆ ಹಾಸನಾಂಭ ದರ್ಶನ ಪಡೆದಿದ್ದೇನೆ ಹಾಗೂ ದೇವಿಯ ಕೃಪಾ ಕಟಾಕ್ಷದ ಕಾರಣ ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗುತ್ತಿದೆ.
ದರ್ಶನಕ್ಕೆ ಜಿಲ್ಲಾಡಳಿತ ಉತ್ತಮ ಸೇವೆ ಒದಗಿಸಿದ್ದು ನಾಡಿನ ಉನ್ನತಿಗೆ ದೇವಿಯನ್ನು ಪ್ರಾರ್ಥಿಸಲಾಗಿದೆ ಎಂದರು.
ಎಸಿ ಎಚ್.ಎಲ್.ನಾಗರಾಜ್ ವರ್ಗಾವಣೆ ಹಿಂದೆ ಯಾವುದೇ ದುರುದ್ದೇಶವಿಲ್ಲಾ. ಅ.30 ರವರೆಗೆ ಅವರನ್ನು ದೇವಾಲಯ ಆಡಳಿತಾಧಿಕಾರಿಯಾಗಿ ಮುಂದುವರೆಯಲು ಆದೇಶ ನೀಡಲಾಗಿದೆ ಎಂದು ಅವರು ತಿಳಿಸಿದರು.