‘ಸಾಕಷ್ಟು ಎಣ್ಣೆ ಸಪ್ಲೈ ಮಾಡ್ತೀವಿ, ನೂಕು ನುಗ್ಗಲು ಆದರೆ ಬಂದ್ ಮಾಡ್ತೀವಿ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ.4- ಉತ್ತಮ ರೀತಿಯಲ್ಲಿ ಮದ್ಯ ಮಾರಾಟವಾಗುತ್ತಿದ್ದು, ವೈನ್ ಸ್ಟೋರ್ ಗಳಿಗೆ ಅಗತ್ಯ ಮದ್ಯ ಸರಬರಾಜು ಆಗಲಿದೆ ಎಂದು ಅಬಕಾರಿ ಸಚಿವ ನಾಗೇಶ ಹೇಳಿದ್ದಾರೆ. ವ್ಯವಸ್ಥೆ ಹಾಳು ಮಾಡುವ ರೀತಿಯಲ್ಲಿ ಯಾರು ವರ್ತಿಸಬಾರದು. ರಾಜ್ಯದ ಕೆಲವೆಡೆ ಗೊಂದಲವಾದ ಬಗ್ಗೆ ಮಾಹಿತಿ ಬಂದಿದೆ.

ಗೊಂದಲವಾದರೆ, ನೂಕು ನುಗ್ಗಲು ಆದರೆ ಈಗ ನಾವು ಮಾಡಿರುವ ವ್ಯವಸ್ಥೆ ಕ್ಲೋಸ್ ಆಗಲಿದೆ ಎಂದು ಮದ್ಯ ಪ್ರಿಯರಿಗೆ ಖಡಕ್ ಸೂಚನೆ ಕೊಟ್ಟರು.ಹೊಸದಾಗಿ ಸರಬರಾಜು ಮಾಡಲು ಗೋದಾಮ್ ಗಳಿಗೆ ಸೂಚನೆ ಕೊಡಲಾಗಿದೆ. ಇಂದು ಸಂಜೆಯಿಂದಲೇ ಮದ್ಯದ ಅಂಗಡಿಗಳಿಗೆ ಮದ್ಯ ಸರಬರಾಜು ಆಗಲಿದೆ.

ಈಗಿರುವ ಮದ್ಯ ಇವತ್ತೇ ಖಾಲಿ ಆಗಲಿದೆ. ದೊಡ್ಡ ಮಟ್ಟದ ಆದಾಯ ನಿರೀಕ್ಷೆ ಮಾಡಿಲ್ಲ. ಲಾಕ್ ಡೌನ್ ನಲ್ಲಿ ನಮಗೆ ನಷ್ಟ ಸಹ ಆಗಿದೆ. ಬಾರ್ ಗಳು, ಕ್ಲಬ್ ಗಳು ಓಪನ್ ಆದರೆ ನಮಗೆ ಲಾಭ ಆಗಲಿದೆ.ಈಗ ಶೇಕಡಾ 40 ರಷ್ಟು ಮಾತ್ರ ಮದ್ಯ ಸರಬರಾಜು ಆದಂಗೆ ಆಗಿದೆ. ಬಾರ್ ಗಳನ್ನು ಓಪನ್ ಮಾಡೋ ಪ್ರಸ್ತಾಪ ಸದ್ಯಕ್ಕಿಲ್ಲ.

ಸಚಿವ ಸಂಪುಟದಲ್ಲೇ ಇದಕ್ಕೆ ತಿರ್ಮಾನ ಆಗಬೇಕು. ಪ್ರಧಾನಿ ಕರೆಯನ್ನು ನಾವು ಗೌರವಿಸುತ್ತೇವೆ ಸಿಎಂ ಸೂಚನೆಗಳನ್ನು ನಾವು ಪಾಲಿಸುತ್ತೇವೆ.ಹಬ್ಬದ ವಾತಾವರಣ ಸೃಷ್ಟಿ ಆಗಿದೆ. ಮದ್ಯ ಪ್ರಿಯರು ಮದ್ಯ ವ್ಯಸನಿಗಳು ಸಹ ಇದ್ದಾರೆ. ಎಲ್ಲರೂ ಇವತ್ತು ಮದ್ಯ ಪಡೆಯುತ್ತಿದ್ದಾರೆ. ಹೊಸದಾಗಿ ಸರಬರಾಜು ಮಾಡುವ ಮದ್ಯಕ್ಕೆ ಹೊಸ ದರವಿರುತ್ತದೆ ಎಂದರು. ನಾಳೆಯಿಂದ ಮದ್ಯದ ದರದಲ್ಲಿ ಶೇ. ಆರರಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ.

Facebook Comments

Sri Raghav

Admin