ಮನೆಯಲ್ಲೇ ರಂಜಾನ್ ಆಚರಿಸುವಂತೆ ಸಚಿವ ಪ್ರಭು ಚವ್ಹಾಣ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 21- ಕೊವಿಡ್-19 ಸೊಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೇಲೆಯಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಈ ಬಾರಿ ಮನೆಯಲ್ಲಿದ್ದುಕೊಂಡೆ ಆಚರಿಸುವುದು ಅನಿವಾರ್ಯವಾಗಿದೆ.

ಪ್ರಾರ್ಥನೆ, ಉಪಾವಾಸ, ಇಫ್ತಾರಗಳನ್ನು ಮನೆಯಲ್ಲೇ ಆಚರಿಸಿ ಹಾಗೂ ಇಡೀ ದೇಶ ಈ ಕೊರೊನಾ ಸಂಕಷ್ಟದಿಂದ ಪಾರಾಗಲು ಅಲ್ಲಾನಲ್ಲಿ ಪ್ರಾರ್ಥಿಸಿ ಎಂದು ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಕೊವಿಡ್ -19 ಸೊಂಕು ಹರಡುತ್ತಿರುವ ಹಿನ್ನೇಲೆಯಲ್ಲಿ ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳನ್ನು ಮುಚ್ಚಲಾಗಿದೆ. ಅಲ್ಲದೇ ಸೊಂಕು ತಡೆಗಟ್ಟುವ ಕಾರಣದಿಂದಾಗಿ ಧಾರ್ಮಿಕ ಸಭೆ, ಸಮಾರಂಭ ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ವಕ್ಫ್ ಕೌನ್ಸಿಲï, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ನೀಡಿರುವ ನಿರ್ದೇಶನದ ಪ್ರಕಾರ ರಂಜಾನ್ ತಿಂಗಳಲ್ಲಿ ಸಾಮೂಹಿಕವಾಗಿ ಸಭೆ ಸೇರುವುದು ಪ್ರಾರ್ಥನೆ, ಮಜ್ಲಿಸ್, ಮಸೀದಿಯಲ್ಲಿ ಇಫ್ತಾರ್ ಸೇರುವುದನ್ನು ನಿಷೇದಿಸಿದೆ.

ಇದಕ್ಕೆ ಸಂಬಂಧಪಟ್ಟಂತೆ ,ಕರ್ನಾಟಕ ರಾಜ್ಯ ವಕ್ಪ್ ಮಂಡಳಿಯಿಂದ ಸಹ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲ ಮಸೀದಿಗಳಲ್ಲಿ ರಂಜಾನ್ ಗೆ ಸಂಬಂಧಪಟ್ಟ ಪ್ರಾರ್ಥನೆ, ಉಪವಾಸ ಹಾಗೂ ಇಫ್ತಾರ್ ಎಲ್ಲವನ್ನು ಮನೆಯಲ್ಲೇ ಆಚರಿಸಲು ತಿಳಿಸಲಾಗಿದೆ.

ಕೊರೊನಾ ಸೊಂಕು ಹರಡುವುದನ್ನು ತಡೆಗಟ್ಟುವ ಹಿನ್ನೇಲೆಯಲ್ಲಿ ಹಸ್ತ ಲಾಘವ , ತಬ್ಬಿಕೊಂಡು ಶುಭ ಕೊರುವುದನ್ನು ಮಾಡಬೇಡಿ ಎಂದಿದ್ದಾರೆ.

Facebook Comments

Sri Raghav

Admin