ರಾಜಪಥದಲ್ಲಿ ಗಜ ಪಡೆಯೊಂದಿಗೆ ಸಚಿವ ಸೋಮಣ್ಣ ಹೆಜ್ಜೆ, ಕುಂದು ಕೊರತೆಗಳ ಪರಿಶೀಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಆ.31- ಜಂಬೂ ಸವಾರಿ ಸಾಗುವ ರಾಜಪಥದ ಮಾರ್ಗವನ್ನು ಗಜ ಪಡೆಯೊಂದಿಗೆ ಸಾಗುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪರಿಶೀಲಿಸಿದರು. ಬೆಳಗ್ಗೆ ಗಜಪಡೆ ತಾಲೀಮು ನಡೆಸುವಾಗ ಆನೆಗಳೊಂದಿಗೆ ಸಚಿವರೂ ಹೆಜ್ಜೆ ಹಾಕಿದರು. ಇದೇ ವೇಳೆ ಮಾರ್ಗದುದ್ದಕ್ಕೂ ಸಚಿವರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.

ಜಂಬೂ ಸವಾರಿ ಸಾಗುವ ಮಾರ್ಗದ ಆಸು ಪಾಸಿನಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಮಾಹಿತಿ ಪಡೆದ ಸೋಮಣ್ಣ ತಕ್ಷಣ ಇದನ್ನೆಲ್ಲಾ ಸರಿಪಡಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ದಸರಾ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಯಾವುದೇ ರೀತಿಯ ಕುಂದು ಕೊರತೆಗಳು ಆಗದಂತೆ ನೋಡಿಕೊಳ್ಳಬೇಕೆಂದು ಆದೇಶಿಸಿದರು.

ಈ ವೇಳೆ ಸಂಸದ ಪ್ರತಾಪ ಸಿಂಹ, ಶಾಸಕ ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಪ್ರವಾಸಿಗರಿಗೆ , ಸಾರ್ವಜನಿಕರಿಗೆ ಎಲ್ಲೂ ಮುಜುಗರವಾಗದಂತೆ ನೋಡಿಕೊಳ್ಳಬೇಕೆಂದು ಸಚಿವರು, ಅಧಿಕಾರಿಗಳಿಗೆ ಇದೇ ವೇಳೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

# ದಸರಾದ ವೆಬ್‍ಸೈಟ್ ಮತ್ತು ಪೋಸ್ಟರ್‍ ಬಿಡುಗಡೆ
ಮೈಸೂರು, ಆ.31- ನಾಡಹಬ್ಬ ದಸರಾದ ವೆಬ್‍ಸೈಟ್ ಮತ್ತು ಪೋಸ್ಟರ್‍ಅನ್ನು ಇಂದು ಬೆಳಗ್ಗೆ ಬಿಡುಗಡೆಗೊಳಿಸಲಾಯಿತು. ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಎಸ್.ಎ.ರಾಮದಾಸ್ ವೆಬ್‍ಸೈಟ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದರು.

ಕನ್ನಡ, ಇಂಗ್ಲಿಷ್ ಸೇರಿದಸಂತೆ 10 ಭಾಷೆಗಳಲ್ಲಿ ಪೋಸ್ಟರ್‍ಗಳನ್ನು ಸಿದ್ಧಪಡಿಸಲಾಗಿದೆ. ದಸರಾ ಬಗ್ಗೆ ಪೂರ್ಣ ಮಾಹಿತಿ ಒದಗಿಸುವ ಈ ಪೋಸ್ಟರ್‍ಗಳನ್ನು ಮೈಸೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳು, ಪ್ರಮುಖ ಸ್ಥಳಗಳಲ್ಲಿ ಅಳವಡಿಸುವ ಮೂಲಕ ದಸರಾಗೆ ಹೆಚ್ಚು ಪರಚಾರ ಮಾಡಲಾಗುವುದು ಎಂದು ಸೋಮಣ್ಣ ಹೇಳಿದರು.

ಪೋಸ್ಟರ್‍ಗಳನ್ನು ಎಲ್ಲ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಸಾರ್ವಜನಿಕರು ಹೆಚ್ಚಾಗಿರುವ ಸ್ಥಳಗಳಲ್ಲಿ ಪ್ರಚಾರಪಡಿಸಲಾಗುತ್ತದೆ ಎಂದರು. ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕ ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮತ್ತಿತರರು ಹಾಜರಿದ್ದರು.

Facebook Comments