ಬಿಡಿಎ ಎಂಪ್ಲಾಯಿಸ್ ವೆಲ್ಫೇರ್ ಅಸೋಷಿಯೇಷನ್ ನಿಂದ ನಿವೇಶನ ಹಂಚಿಕೆ: ಸಚಿವ ಸೋಮಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.21- ಬಿಡಿಎ ಎಂಪ್ಲಾಯಿಸ್ ವೆಲ್ಫೇರ್ ಅಸೋಷಿಯೇಷನ್ ನಿಂದ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರಗಳು ನಡೆದಿದ್ದು, ಈಗಾಗಲೇ ಸೂಕ್ರ ಕ್ರಮ ಕೈಗೊಳ್ಳಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಆಯನೂರು ಮಂಜುನಾತ್ ಅವರ ಪ್ರಶ್ನೆ ಕೇಳಿ, ಬಿಡಿಎ ಹೆಸರಿನಲ್ಲಿ ಎರಡು ಸಂಘಗಳು ನೋಂದಣಿಯಾಗಿವೆ. ಇವುಗಳಿಗೆ ನಿವೇಶನ ಹಂಚಲು ಅವಕಾಶ ಇದೆಯಾ. ಸುವರ್ಣ ಕರ್ನಾಟಕದ ಹೆಸರಿನಲ್ಲಿ ಬಿಡಿಎ ನೌಕರರಿಗೆ ನಿವೇಶನ ನೀಡಲು ಸರ್ಕಾರ 45 ಎಕರೆ ಭೂಮಿ ನೀಡಲಾಗಿತ್ತು. ಭೂಮಿ ಕೊಟ್ಟಿದ್ದು ಬೇರೆ ಸಂಘಕ್ಕೆ, ಭೂಮಿ ನೋಂದಣಿಯಾಗಿದ್ದು ಬೇರೆ ಸಂಘಕ್ಕೆ. ನಿವೇಶನ ಹಂಚಿಕೆಯಲ್ಲಿ ಬಾರಿ ಅವ್ಯವಹಾರ ನಡೆದಿದೆ.

ಸಂಘದ ಸದಸ್ಯರಲ್ಲದ 850 ಮಂದಿಗೆ ನಿವೇಶನ ನೀಡಲಾಗಿದೆ. ಈ ಹಿಂದಿನ ಬಿಡಿಎ ಆಯುಕ್ತರು ಒಂದು ಎಕರೆಯನ್ನು ಖಾಸಗಿಯವರಿಗೆ ನೋಂದಣಿ ಮಾಡಿಕೊಟ್ಟಿದ್ದಾರೆ. ಈ ರೀತಿ ಭ್ರಷ್ಟಚಾರ ಮಾಡಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.

ಉತ್ತರ ನೀಡಿದ ಸಚಿವರು, ಬಿಡಿಎನಿಂದ 48 ಎಕರೆ ಹಂಚಿಕೆಯಾಗಿ 42 ಎಕರೆ ಹಸ್ತಾಂರವಾಗಿದೆ, ಐದು ಎಕರೆ ಭಾಕಿ ಇದೆ. ಸಂಘದವರು ಬಿಡಿಎಗೆ ಹಣ ಕಟ್ಟಿದ್ದಾರೆ. ಮೊದಲು ನೊಂದಣಿಯಾಗಿದ್ದ ಸಂಘದಲ್ಲಿ ನಿವೇಶನ ಹಂಚಿಕೆ ಮಾಡಲು ಅವಕಾಶ ಇಲ್ಲದ ಕಾರಣಕ್ಕೆ ಬೈಲಾ ಹಾಗೂ ನಿಯಮಗಳಲ್ಲಿ ಬದಲಾವಣೆ ಮಾಡಿಕೊಂಡು ಗೃಹ ನಿರ್ಮಾಣ ಸಂಘ ಎಂದು ಹೆಸರು ಸೇರಿಸಿದ್ದಾರೆ. ನಿವೇಶನ ಹಂಚಿಯಲ್ಲಿ ಅವ್ಯವಹಾರ ಮಾಡಿದ್ದಾರೆ.

ಅದರ ತನಿಖೆ ನಡೆದಿದೆ ಸಂಘವನ್ನು ಸೂಪರ್ ಸೀಡ್ ಮಾಡಲಾಗಿದೆ, ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಬಾಕಿ ಇರುವ ಐದು ಎಕರೆಯನ್ನು ಭೂಮಿಯನ್ನು ಹಂಚಿಕೆ ಮಾಡಿ, ನಿವೇಶನ ಮಾಡಿ ಹಂಚಿಕೆ ಮಾಡಲಾಗುವುದು ಎಂದರು.

Facebook Comments

Sri Raghav

Admin