ಡಿಸೆಂಬರ್ ವರೆಗೆ ಸಹಕಾರಿ ಕ್ಷೇತ್ರದ ಚುನಾವಣೆ ಮುಂದೂಡಿಕೆ : ಎಸ್.ಟಿ.ಸೋಮಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕೋಡಿ : ಸುಮಾರು 15-20 ವರ್ಷಗಳ ನಂತರ ಸಹಕಾರ ಕ್ಷೇತ್ರಕ್ಕೆ ಒಬ್ಬ ಉತ್ತಮ ಸಚಿವರು ಸಿಕ್ಕಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಒಬ್ಬ ದಕ್ಷ, ಪ್ರಾಮಾಣಿಕ ಸಚಿವರನ್ನು ನೇಮಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಸಹಕಾರ ಇಲಾಖೆ ಹಾಗೂ ಜೊಲ್ಲೆ ಎಜುಕೇಶನ್ ಸೊಸೈಟಿ ಎಕ್ಸಂಬಾ ವತಿಯಿಂದ ಬೆಳಗಾವಿ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿಯಂತೆ ಸುಮಾರು 44 ಲಕ್ಷ ರೂಪಾಯಿ ಪ್ರೋತ್ಸಾಹ ಧನ ಚೆಕ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಇಷ್ಟು ವರ್ಷ ಸಹಕಾರ ಸಚಿವರು ಇದ್ದೂ ಇಲ್ಲದಂತೆ ಇದ್ದರು. ಸಹಕಾರಿ ಧುರೀಣರಾದ ಸೋಮಶೇಖರ್ ಅವರು ಹತ್ತು ಹಲವು ಕಾರ್ಯಗಳನ್ನು ಹಾಕಿಕೊಳ್ಳುತ್ತಾ ಸಹಕಾರಿ ಕ್ಷೇತ್ರ ಉಳಿಯುವಂತೆ ಮಾಡಿದ್ದಾರೆ. ಇದೇ ರೀತಿ ರೈತರ ಪರವಾಗಿ ಇವರ ಸೇವೆ ಮುಂದುವರಿಯಲಿ ಎಂದು ನಾನು ಆಶಿಸುತ್ತೇನೆ ಎಂದು ಹೇಳಿದರು.

#ಸಹಕಾರಿ ಕ್ಷೇತ್ರದ ಚುನಾವಣೆ ಮುಂದೂಡಿಕೆ
ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಮಾತನಾಡಿ, ಮಾನ್ಯ ಮುಖ್ಯಮಂತ್ರಿಗಳು 18 ವರ್ಷದ ಯುವಕರಂತೆ ಕಾರ್ಯನಿರ್ಹಣೆ ಮಾಡುತ್ತಿದ್ದಾರೆ. 24×7 ಮಾದರಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಪಣತೊಟ್ಟು ಕೆಲಸ ಮಾಡುತ್ತಿದ್ದು, ಸಚಿವರು ಮತ್ತು ಜಿಲ್ಲಾಡಳಿತಗಳ ಜೊತೆ ನಿರಂತರವಾಗಿ ಮಾಹಿತಿಗಳನ್ನು ಪಡೆದು, ಸಲಹೆ ಸೂಚನೆಗಳನ್ನು , ಮಾರ್ಗದರ್ಶನಗಳನ್ನು ನೀಡುತ್ತಾ ಬಂದಿದ್ಧಾರೆ. ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಶಿಷ್ಟಾಚಾರವನ್ನು ಪಾಲಿಸಬೇಕಾಗಿದೆ. ಹಾಗಾಗಿ ಸಹಕಾರಿ ಕ್ಷೇತ್ರದ ಎಲ್ಲ ಚುನಾವಣೆಗಳನ್ನು ಡಿ. 31ರ ತನಕ ಮುಂದೂಡಲಾಗಿದೆ ಎಂದು ತಿಳಿಸಿದರು.

ರೈತರಿಗೆ ಹಾಗೂ ಸ್ವಸಹಾಯ ಗುಂಪುಗಳಿಗೆ ಮಧ್ಯಮಾವಧಿ, ಅಲ್ಪಾವಧಿ ಹಾಗೂ ದೀರ್ಘಾವಧಿ ಸಾಲವಾಗಿ ನೀಡಲಾಗಿದ್ದ ಸಾಲದಲ್ಲಿ ಮೇಲಿನ ಬಡ್ಡಿ ಸಹಾಯಧನ ನೀಡುವ ಅವಧಿಯನ್ನು ಆ.31ರ ತನಕ ವಿಸ್ತರಣೆ ಮಾಡಲಾಗಿದ್ದು, 36.77 ಕೋಟಿ ರೂ.ವಷ್ಟು ಹಣವನ್ನು ರಾಜ್ಯಸರ್ಕಾರವೇ ಭರಸಲಿದೆ. ಇದು ಸರ್ಕಾರಕ್ಕೆ ಹೊರೆಯಾದರೂ ರೈತರ ಅನುಕೂಲಕ್ಕಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಹೀಗಾಗಿ ರಾಜ್ಯದ ಸುಮಾರು 1.95 ಲಕ್ಷ ರೈತರಿಗೆ ಮತ್ತು 66 ಸಾವಿರ ಸ್ವಸಹಾಯ ಗುಂಪುಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದ ಕೊರೋನಾ ವಾರಿಯರ್ಸ್ ಗಳಾದ 42,608 ಆಶಾ ಕರ್ಯಕರ್ತೆಯರು ಇದ್ದು, ಇದುವರೆಗೂ ಸುಮಾರು 28 ಸಾವಿರ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹಧನವನ್ನು ವಿತರಣೆ ಮಾಡಿದ್ದೇವೆ. ಇನ್ನೂ ವಾರ ಇಲ್ಲವೇ 10 ದಿನಗಳೊಳಗೆ ಉಳಿದ ಎಲ್ಲರಿಗೂ ಪ್ರೋತ್ಸಾಹಧನವನ್ನು ವಿತರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಅಣ್ಣಾ ಸಾಹೇಬ್ ಜೊಲ್ಲೆ, ಸಚಿವರಾದ ಶಶಿಕಲಾ ಜೊಲ್ಲೆ, ಕುಡುಚಿ ಕ್ಷೇತ್ರದ ಶಾಸಕ ಪಿ,ರಾಜೀವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ಬಾರಿ ರೈತರಿಗೆ 13,500 ಕೋಟಿ ರೂಪಾಯಿ ಬೆಳೆಸಾಲವನ್ನು ನೀಡಲಾಗಿತ್ತು. ಈ ಬಾರಿ 14,500 ಕೋಟಿ ರೂಪಾಯಿ ಬೆಳೆ ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಹೀಗಾಗಿ ಏ.1ರಿಂದ ಇಲ್ಲಿಯವರೆಗೆ ಸುಮಾರು 8 ಸಾವಿರ ಕೋಟಿ ರೂಪಾಯಿಯನ್ನು ವಿತರಣೆ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.

Facebook Comments

Sri Raghav

Admin