ಕೊರೊನಾ ಲಸಿಕೆ ಇನ್ನೂ ಸಿದ್ಧವಾಗಿಲ್ಲ: ಸಚಿವ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ನ.21- ಕೊರೊನಾ ಲಸಿಕೆ ಇನ್ನೂ ಬಿಡುಗಡೆ ಆಗಿಲ್ಲ. ಅಕೃತ ಆದ ನಂತರ ನಿಮಗೂ ಗೊತ್ತಾಗುತ್ತದೆ ಎಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ, ಪ್ರಧಾನಿಯವರು ಕ್ಲಿನಿಕಲ್ ಟ್ರಯಲ್ ನಡೆಸಿರುವ ಕಂಪೆನಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ.

ಅಡ್ವಾನ್ಸ್ ಆಗಿ ಮೂರನೆ ಹಂತ ತಲುಪಿದ ಕಂಪೆನಿ ಜತೆ ಕೇಂದ್ರ ಸಮಾಲೋಚನೆ ನಡೆದಿದ್ದು, ಅದೇ ರೀತಿ ಕಂಪೆನಿಗಳ ಜತೆ ಕೇಂದ್ರ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ. ಯಾವ ಕಂಪೆನಿಗೆ ಅಕೃತ ಎಂದು ಘೋಷಣೆ ಮಾಡುತ್ತಾರೆ ಆ ಲಸಿಕೆ ಸಿಗುವ ಕೆಲಸ ಆಗುತ್ತದೆ ಎಂದರು.

ಭಾರತ ದೇಶದಲ್ಲಿ ದೊಡ್ಡ ಮಟ್ಟಿಗೆ ಲಸಿಕೆ ಸಿಗುವ ಕೆಲಸ ಆಗುತ್ತದೆ. ಆರೋಗ್ಯ ಇಲಾಖೆಯಲ್ಲಿ ಜನಪರ ಬದಲಾವಣೆಗಳು ನಡೆಯುತ್ತಿವೆ.
ಅಂತಾರಾಷ್ಟ್ರೀಯ ಗುಣಮಟ್ಟದ 108 ಆಂಬುಲೆನ್ಸ್ ಸರ್ವೀಸ್‍ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ನಾವು ಯಾರೂ ಸಹ ಹೊರೆತಾಗಿಲ್ಲ. ಎಷ್ಟು ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಬಂದಿದೆ ನಿಖರ ಮಾಹಿತಿ ಇಲ್ಲ. ಉನ್ನತ ಶಿಕ್ಷಣ ಸಚಿವರ ಜತೆ ಮಾತನಾಡಿ ಮಾಹಿತಿ ಪಡೆಯುತ್ತೇನೆ. ಲಸಿಕೆ ಬಂದ್ರೆ ಅದರ ಸಂಗ್ರಹಕ್ಕೆ ಎಲ್ಲ ವ್ಯವಸ್ಥೆ ಆಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.

ಕೇಂದ್ರ ಆರೋಗ್ಯ ಸಚಿವರ ಜತೆ ವಿಡಿಯೋ ಸಂವಾದವೂ ಆಗಿದೆ. ಕೊರೊನಾ ಲಸಿಕೆ ಬಂದ ಮೇಲೆ ವಿತರಣೆ ನಿಧಾನ ಆಗಬಾರದೆಂದು ಸಕಲ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲಸಿಕೆ ವಿತರಿಸುವ ವ್ಯವಸ್ಥೆ ಆಗಿದೆ ಎಂದು ಸುಧಾಕರ್ ಹೇಳಿದರು.
ಜಾರಕಿಹೊಳಿ ಬಿ.ಎಲ್.ಸಂತೋಷ್ ಭೇಟಿಯಾಗೋದು ಅಪರಾಧಾನಾ?

ರಮೇಶ್ ಜಾರಕಿಹೊಳಿ ಬಿ.ಎಲ್.ಸಂತೋಷ್ ಭೇಟಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಾ.ಕೆ.ಸುಧಾಕರ್, ರಮೇಶ್ ಜಾರಕಿಹೊಳಿ ಬಿ.ಎಲ್.ಸಂತೋಷ್ ಭೇಟಿಯಾಗೋದು ಅಪರಾಧಾನಾ ಎಂದು ಪ್ರಶ್ನೆ ಮಾಡಿದರು.

ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗೋದು ಅಪರೂಪ ಏನಲ್ಲ. ರಮೇಶ್ ಜಾರಕಿಹೊಳಿ ಆವಾಗಾವಾಗ ದೆಹಲಿಗೆ ಹೋಗುತ್ತಿರುತ್ತಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಮಟ್ಟದ ನಾಯಕನ ಭೇಟಿಯಾಗುವ ಆಸೆ ಇರುತ್ತದೆ. ಸೌಜನ್ಯಯುತ ಭೇಟಿ, ಆಡಳಿತ ಹಾಗೂ ಇಲಾಖೆ, ರಾಜಕಾರಣ ಬಗ್ಗೆ ಮಾತನಾಡಿರಬಹುದು ಎಂದು ಸುಧಾಕರ್ ಹೇಳಿದರು.  ಮಾಜಿ ಶಾಸಕ ಸಂಜಯ್ ಪಾಟೀಲ್, ಶಾಸಕ ಅನಿಲ್ ಬೆನಕೆ ಉಸ್ಥಿತರಿದ್ದರು.

Facebook Comments