ಕರ್ನಾಟಕ ಬಂದ್ ರಾಜಕೀಯ ಪ್ರೇರಿತ ಷಡ್ಯಂತ್ರ : ಸಚಿವ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಫೆ.14- ಜನತೆಯ ಆಶೋತ್ತರಗಳಿಗೆ ಆಗ್ಗಿಂದ್ದಾಗ್ಗೆ ಸ್ಪಂದಿಸಿ ಕಾರ್ಯನಿರ್ವಹಿಸುತ್ತಿರುವ ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ದವಾಗಿದ್ದರೂ ಕರ್ನಾಟಕ ಬಂದ್ ಆಚರಿಸುವುದರಲ್ಲಿ ಅರ್ಥವಿಲ್ಲ. ಇದು ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ತಾಲೂಕಿನ ತಾಂಡ್ರಮರದಹಳ್ಳಿ ಗ್ರಾಮದಲ್ಲಿ ಅಮೃತ ಭವನ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕರ್ನಾಟಕ ಬಂದ್ ರಾಜಕೀಯ ಪ್ರೇರಿತ.

ಇದರಿಂದ ಜನ ಸಾಮಾನ್ಯರಿಗೆ ಸಂಕಷ್ಟವೇ ಹೊರತು ಬೇರೇನೂ ಅಲ್ಲ. ರೈತರಿಗೆ, ರೋಗಿಗಳಿಗೆ ತೀವ್ರತರ ತೊಂದರೆಯಾಗಲಿದ್ದು, ಈ ಬಗ್ಗೆ ಪ್ರಭುದ್ದರು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಪ್ರಚೋದನೆಗಳಿಗೆ ಕಿವಿಗೊಡಬಾರದು. ಸರ್ಕಾರ ಅಭಿವೃದ್ದಿ ವಿಚಾರದಲ್ಲಿ ಮುಂದಿದೆ ಎಂದರು. ಯಾವುದೇ ವಿಚಾರದಲ್ಲಿ ಸಮಸ್ಯೆ ಏನೇ ಇದ್ದರೂ ಸರ್ಕಾರ ಬಗೆಹರಿಸಲು ಸಿದ್ದವಿದೆ. ಪದೇ ಪದೇ ಭಾರರ್ ಬಂದ್, ಕರ್ನಾಟಕ ಬಂದ್‍ನಂತ ಕಾರ್ಯಕ್ರಮಗಳನ್ನು ಮೊದಲು ಕೈಬಿಟ್ಟು ಸರ್ಕಾರದ ಅಭಿವೃದ್ದಿ ಕಾರ್ಯಗಳ ಜೊತೆ ಕೈಜೋಡಿಸಲು ಮುಂದಾಗಿ ಎಂದು ಪ್ರತಿಭಟನಾನಿರತರಿಗೆ ಕಿವಿ ಮಾತು ಹೇಳಿದರು.

ಮಾದರಿ ರಸ್ತೆ ನಿರ್ಮಾಣದ ಗುರಿ: ರಾಜ್ಯದಲ್ಲಿ ಮಾದರಿ ರಸ್ತೆಗಳನ್ನಾಗಿ ಮಾಡುವ ಗುರಿ ಸರ್ಕಾರಕ್ಕಿದ್ದು, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಇದೇ ವೇಳೆ ತಿಳಿಸಿದರು. ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಇದೇ ವೇಳೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ತಾಂಡ್ರಮರದಹಳ್ಳಿ ಗ್ರಾಮದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.  ತಾ.ಪಂ. ಅಧ್ಯಕ್ಷ ಸಿ.ಡಿ. ರಾಮಸ್ವಾಮಿ, ಕೋಚಿಮುಲ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ, ಗ್ರಾ.ಪಂ ಅಧ್ಯಕ್ಷ ಮೀನಾ ದೇವರಾಜï, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಉಪವಿಭಾಗಾಧಿಕಾರಿ ರಘುನಂದನ್, ಎಪಿಎಂಸಿ ಮಾಜಿ ಅದ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ, ತಾ.ಪಂ. ಮಾಜಿ ಅದ್ಯಕ್ಷ ಪಿ.ಎ. ಮೋಹನ್, ಮುಖಂಡರಾದ ಮುನಿರೆಡ್ಡಿ, ನಾಗರಾಜï, ಗಿಡ್ನಹಳ್ಳಿ ನಾರಾಯಣಸ್ವಾಮಿ, ಕೃಷ್ಣಾರೆಡ್ಡಿ, ಕೋಚಿಮುಲï ಉಪ ವ್ಯವಸ್ಥಾಪಕ ಪಾಪೇಗೌಡ ಹಾಜರಿದ್ದರು.

Facebook Comments