‘ಬದಲಾಗು ನೀನು ಬದಲಾಯಿಸು ನೀನು’ ಹಾಡಿಗೆ ಧ್ವನಿಯಾದ ತಾರೆಯಾರಿಗೆ ಸಚಿವ ಸುಧಾಕರ್ ಕೃತಜ್ಞತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 25-ಮನುಕುಲಕ್ಕೆ ಕಂಟಕವಾಗಿರುವ ಮಹಾಮಾರಿ ಕೊರೊನಾ ವಿರುದ್ಧ ಸರ್ಕಾರದ ಹೋರಾಟಕ್ಕೆ ದನಿಯಾದ ಚಿತ್ರನಟರಾದ ಯಶ್, ದ್ರುವಸರ್ಜಾ, ಖ್ಯಾತ ಕ್ರಿಕೆಟಿಗ ರಾಹುಲ್‍ದ್ರಾವಿಡ್ ಅವರಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಕೃತಜ್ಞತೆ ಸಲ್ಲಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಸ್ತುತ ಪಡಿಸುತ್ತಿರುವ “ಬದಲಾಗು ನೀನು ಬದಲಾಯಿಸು ನೀನು” ಗೀತೆಯಲ್ಲಿ ಧ್ವನಿಯಾಗಿ ಕೊರೊನಾ ವಿರುದ್ಧ ಹೋರಾಟಕ್ಕೆ ಸರ್ಕಾರದ ಪರ ನಿಂತ ಸಮಸ್ತ ಚಿತ್ರ ನಟ-ನಟಿಯರಿಗೆ, ಸಂಗೀತಗಾರರು, ನಿರ್ಮಾಪಕರು, ತಾರೆಯರೆಲ್ಲರಿಗೂ ಸಚಿವರು ತಮ್ಮ ಟ್ವಿಟ್‍ನಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

ಹಾಡಿನ ಮೂಲಕ ತಾರೆಯರು ಜನ ಜಾಗೃತಿ ಮೂಡಿಸುವ ಮೂಲಕ ಕೊರೊನಾ ನಿಯಂತ್ರಣದಲ್ಲಿ ತಮ್ಮದೇ ಆದ ರೀತಿಯಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

Facebook Comments