ಚಿತ್ರಕಲೆ ಬಗ್ಗೆ ಪ್ರತ್ಯೇಕ ಪಠ್ಯಪುಸ್ತಕ ಜಾರಿ : ಸಚಿವ ಸುರೇಶ್ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.10- ಚಿತ್ರಕಲೆ ಬಗ್ಗೆ ಪ್ರತ್ಯೇಕ ಪಠ್ಯಪುಸ್ತಕ ಇಲ್ಲದಿರುವುದು ವಿಪರ್ಯಾಸ. ಈ ಕುರಿತು ಚರ್ಚೆ ನಡೆಸಿ ಪ್ರತ್ಯೇಕ ಪಠ್ಯಕ್ರಮ ಜಾರಿಗೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭರವಸೆ ನೀಡಿದರು. ಕರ್ನಾಟಕ ರಾಜ್ಯ ಸರ್ಕಾರಿ ಚಿತ್ರಕಲಾ ಶಿಕ್ಷಕರ ಸಂಘ ಆಯೋಜಿಸಿದ್ದ ರಾಜ್ಯ ಮಟ್ಟದ ಮೂರು ದಿನಗಳ ಚಿತ್ರಕಲಾ ಶಿಕ್ಷಕರ ಮತ್ತು ವಿದ್ಯಾರ್ಥಿಗಳಿಗಳ ಚಿತ್ರಕಲಾ ಪ್ರದರ್ಶನ ಹಾಗೂ ಕರ್ನಾಟಕ ಜಾನಪದ ಸಂಸ್ಕೃತಿ ಎಂಬ ವಿಷಯದ ಚಿತ್ರಕಲಾ ಶಿಕ್ಷಕರ ಚಿತ್ರರಚಾನಾ ಕಾರ್ಯಗಾರ ಉದ್ಘಾಟಸಿ ಅವರು ಮಾತನಾಡಿದರು.

ಮಕ್ಕಳ ಕಲಿಕೆ ಪ್ರಕ್ರಿಯೆಯಲ್ಲಿ ಸಾಹಿತ್ಯ, ಸಂಗೀತ, ನೃತ್ಯ ಚಿತ್ರಕಲೆ ಅತ್ಯಗತ್ಯ. ಮಕ್ಕಳು ಅಂಕಗಳಿಗೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಶಿಕ್ಷಕರು, ಪೋಷಕರು ಅವರಿಗೆ ಸಹಕಾರ ನೀಡಬೇಕು ಎಂದರು. ಇತ್ತೀಚೆಗೆ ಶಾಲೆಯಲ್ಲಿ ಮಗುವೊಂದು ಶಿಕ್ಷಕರು ಹೇಳಿಕೊಡುತ್ತಿರುವ ಪಕ್ಕೆಲುಬು ಎಂಬ ಪದವನ್ನು ಸರಿಯಾಗಿ ಉಚ್ಚರಿಸಲು ಬಾರದೇ ಪದೇ ಪದೇ ತಪ್ಪು ಹೇಳುತ್ತಿರುವ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

ಈ ರೀತಿ ಮಾಡುವ ಬದಲು ಅವರನ್ನು ತಿದ್ದಿ ತೀಡುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಹೇಳಿದರು. ಪ್ರತಿಯೊಂದು ಮಗುವಿನಲೂ ಸಹ ತನ್ನದೇ ಆದಂತಹ ಪ್ರತಿಭೆ ಹೊಂದಿರುತ್ತದೆ. ಅದನ್ನು ಬಡಿದೆಬ್ಬಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದ ಅವರು, ಜೀವನದಲ್ಲಿ ಭರವಸೆ ಮೂಡಲು ಚಿತ್ರಕಲೆಗಳಂತಹ ಶಿಕ್ಷಣ ಅಗತ್ಯ ಎಂದರು. ರಾಜ್ಯ ಸರಕಾರಿ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಪ್ಪ,ಮಾತನಾಡಿ 1ರಿಂದ 12ನೆ ತರಗತಿ ಮಕ್ಕಳಿಗೆ ಚಿತ್ರಕಲೆ ತರಗತಿ ಶಿಕ್ಷಣ ನೀಡಬೇಕು.

ಚಿತ್ರಕಲೆ ಬಗ್ಗೆ ಪ್ರತ್ಯೇಕ ಪಠ್ಯಕ್ರಮ ಹೊರತರಬೇಕು. ಚಿತ್ರಕಲೆ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ಎಲ್ಲ ಸರಕಾರಿ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರನ್ನು ನೇಮಕ ಮಾಡಬೇಕು. ಸರಕಾರಿ ಪ್ರತ್ಯೇಕ ಚಿತ್ರಕಲಾ ಕಾಲೇಜು ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಹಿಡೆರಿಸುವಂತೆ ಎಂದು ಶಿಕ್ಷಣ ಸಚಿವರಿಗೆ ಮನವಿ ಮಾಡಿದರು.

ಇದೆ ಸಂದರ್ಭದಲ್ಲಿ ನಿವೃತ್ತ ಕಲಾವಿದು ಶಿಕ್ಷಣ ವಾರ್ತೆ ಆಯುಕ್ತ ಜಿ. ಕೆ.ಶಿವಣ್ಣ ಅವನ್ನ ಸನ್ಮನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಖ್ಯಾತ ಕಲಾವಿದ ಗುಜ್ಜಾರಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ರಾಮಪ್ಪ ಸಂಘದ ಜಂಟಿ ಕಾರ್ಯದರ್ಶಿ ಟಿ.ಲಕ್ಷ್ಮೀನಾರಯಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments