ಇಲಾಖೆಗಳ ವಿಲೀನ ಕೈಬಿಡುವಂತೆ ನೌಕರರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.4- ಸಚಿವಾಲಯದ ಹುದ್ದೆಗಳ ರದ್ದತಿ ಹಾಗೂ ಇಲಾಖೆಗಳ ವಿಲೀನ ಪ್ರಸ್ತಾವನೆಗಳನ್ನು ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ಸಚಿವಾಲಯ ನೌಕರರ ಸಂಘ ಇಂದು ಪ್ರತಿಭಟನೆ ನಡೆಸಿತು.

ಆಡಳಿತಾತ್ಮಕ ವೆಚ್ಚಗಳನ್ನುಕಡಿಮೆ ಮಾಡುವ ನಿಟ್ಟಿನಲ್ಲಿ ಹಲವಾರು ಹುದ್ದೆಗಳನ್ನು ಕಡಿತ ಮಾಡುವುದು ಅನಗತ್ಯ ಇಲಾಖೆಗಳನ್ನು ವಿಲೀನ ಮಾಡುವುದಕ್ಕಾಗಿ ಸರ್ಕಾರ ಚಿಂತನೆ ನಡೆಸಿದೆ. ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಉಪಸಮಿತಿಯನ್ನು ರಚನೆ ಮಾಡಲಾಗಿದೆ.

ಸಚಿವಾಲಯದ ಹುದ್ದೆಗಳ ರದ್ದತಿಗೆ ಹಾಗೂ ಇಲಾಖೆಗಳ ವಿಲೀನಕ್ಕೆ ವಿರೋಧ ವ್ಯಕ್ತವಾಗಿದೆ. ಸಚಿವಾಲಯದಲ್ಲಿ ಕಾಲಕಾಲಕ್ಕೆ ಖಾಲಿಯಾಗುವ ಹುದ್ದೆಗಳನ್ನು ಭರ್ತಿ ಮಾಡುವುದು, ತುಟಿಭತ್ಯೆ ಹೆಚ್ಚಳ ಆದೇಶವನ್ನು ಕೂಡಲೇ ಜಾರಿಗೊಳಿಸುವುದು, ಗಳಿಕೆ ರಜೆ, ನಗದೀಕರಣ ರದ್ದತಿ ಆದೇಶವನ್ನು ಹಿಂಪಡೆಯುವುದು, ನೌಕರ ವಿರೋಧ ಅಂಶಗಳಿರುವ ಸಿಸಿಎ ತಿದ್ದುಪಡಿ ಪ್ರಸ್ತಾವನೆಯನ್ನು ಕೈಬಿಡುವುದು, ಎನ್‍ಪಿಎಸ್ ಪದ್ದತಿ ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಪದ್ದತಿಯನ್ನು ಜಾರಿಗೊಳಿಸುವುದು, ಕೊರೊನಾ ತಡೆಗಟ್ಟುವಿಕೆಯಲ್ಲಿ ನಿರತರಾಗಿರುವ ನೌಕರರಿಗೆ ರಕ್ಷಣೆ ಮತ್ತು ವಿಶೇಷ ಪ್ರೋತ್ಸಾಹ ಧನ ನೀಡುವಂತೆ ಬೇಡಿಕೆಗಳನ್ನು ಮುಂದುರಿಸಲಾಗಿದೆ.

ಸಚಿವಾಲಯದಲ್ಲಿಂದು ಎಲ್ಲ ನೌಕರರು ಬೇಡಿಕೆಯ ಭಿತ್ತಿಪತ್ರವನ್ನು ಪ್ರದರ್ಶಿಸುವ ಮೂಲಕ ಕರ್ತವ್ಯ ನಿರ್ವಹಿಸಿದರು. ಮಧ್ಯಾಹ್ನ ಗಾಂಧಿಪ್ರತಿಮೆ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.

Facebook Comments