ಕ್ಷಿಪಣಿ ದಾಳಿ:70 ಯೋಧರು ಹತ

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಜ.19- ಮಧ್ಯ ಪ್ರಾಚ್ಯ ದೇಶಗಳಲ್ಲಿ ಇರಾನ್ ಬೆಂಬಲಿತ ಹುತಿ ಭಯೋತ್ಪಾದಕರ ಅಟ್ಟಹಾಸ ಮುಂದುವರೆದಿದೆ. ಮರಿ ಪ್ರಾಂತ್ಯದ ಸೇನಾ ಶಿಬಿರದ ಬಳಿ ಇದ್ದ ಮಸೀದಿಯೊಂದರ ಮೇಲೆ ಕ್ಷಿಪಣಿ ದಾಳಿ ನಡೆಸಿದ ಬಂಡುಕೋರರು 70ಕ್ಕೂ ಹೆಚ್ಚು ಯೆಮೆನ್ ಯೋಧರನ್ನು ಕೊಂದು ಹಾಕಿದ್ದಾರೆ.

ಉಗ್ರರ ಈ ದಾಳಿಯಲ್ಲಿ ಅನೇಕರಿಗೆ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸೇನಾ ಮತ್ತು ವೈದ್ಯಕೀಯ ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ರಾತ್ರಿ ಮಸೀದಿಯಲ್ಲಿ ಯೆಮೆನ್ ಯೋಧರು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ ಸಂದರ್ಭದಲ್ಲಿ ಉಗ್ರರು ಕ್ಷಿಪಣಿ ದಾಳಿ ನಡೆಸಿದರು.

ಈವರೆಗೆ 70 ಮಂದಿ ಯೋಧರು ಹತರಾಗಿದ್ದಾರೆ ಎಂದು ಸೇನಾಧಿಕಾರಿಗಳು ಖಚಿತಪಡಿಸಿದ್ದಾರೆ. ಇರಾನ್ ಬೆಂಬಲಿತ ಹುತಿ ಉಗ್ರರ ದುಷ್ಕøತ್ಯವನ್ನು ಯೆಮೆನ್ ಅಧ್ಯಕ್ಷ ಅಬ್ಬೆರಬ್ಬೊ ಮನ್ಸೂರ್ ಅದಿ ಖಂಡಿಸಿದ್ದಾರೆ.

Facebook Comments