ಕಾಶ್ಮೀರ : ಎರಡು ಪಾಕ್ ಕ್ಷಿಪಣಿ ಶೆಲ್‍ಗಳು ನಿಷ್ಕ್ರಿಯ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಅ.23- ಪಾಕಿಸ್ತಾನಿ ಸೇನೆ ಭಾರತದ ಗಡಿಯೊಳಗೆ ಉಡಾಯಿಸಿದ್ದ ಸಮರ ಟ್ಯಾಂಕ್ ಧ್ವಂಸ ಮಾಡುವ ಎರಡು ಜೀವಂತ ಕ್ಷಿಪಣಿ ಕೋಶಗಳನ್ನು ಭಾರತೀಯ ಯೋಧರು ನಿಷ್ಕ್ರಿಯಗೊಳಿಸಿದ್ದಾರೆ.

ಇದರಿಂದ ಪೂಂಚ್ ಜಿಲ್ಲೆಯಲ್ಲಿ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಪಾಕಿಸ್ತಾನಿ ಸೇನೆ ನಿನ್ನೆ ಭಾರತದ ಸೇನಾ ನೆಲೆಗಳು ಮತ್ತು ಗಡಿ ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ಶೆಲ್ ದಾಳಿ ನಡೆಸಿತ್ತು.

ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಎರಡು ಪಾಕ್ ಕ್ಷಿಪಣಿ ಶೆಲ್‍ಗಳು ಪತ್ತೆಯಾದವು. ತಕ್ಷಣ ಕಾರ್ಯ ಪ್ರವೃತ್ತರಾದ ಭಾರತೀಯ ಸೇನೆಯ ಇಂಜಿನಿಯರ್‍ಗಳು ಅವುಗಳನ್ನು ನಿಷ್ಕ್ರಿಯಗೊಳಿಸಿದರು.

ಇವೆರಡು ಮಿಸೈಲ್ ಶೆಲ್‍ಗಳು ಯುದ್ಧ ಟ್ಯಾಂಕ್ ಅನ್ನು ಧ್ವಂಸಗೊಳಿಸುವ ಸಾಮಥ್ರ್ಯ ಹೊಂದಿದ್ದವು. ಇವು ಸ್ಫೋಟಗೊಂಡಿದ್ದರೆ ಆ ಪ್ರದೇಶದಲ್ಲಿ ಭಾರೀ ಅನಾಹುತ ಸಂಭವಿಸುತ್ತಿತ್ತು.

Facebook Comments