ಮಳೆಗಾಗಿ ಒಂದೇ ಕುಟುಂಬದ ಮೂವರು ಮಕ್ಕಳು ನಾಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.6- ಮೈದಾನದಲ್ಲಿ ಆಟವಾಡಿ ಬರುತ್ತೇವೆಂದು ಹೇಳಿ ಮನೆಯಿಂದ ಹೊರಹೋದ ಒಂದೇ ಕುಟುಂಬದ ಮೂವರು ಮಕ್ಕಳು ಕಾಣೆಯಾಗಿದ್ದಾರೆ.
ಕಾಮಾಕ್ಷಿಪಾಳ್ಯ ಫೋಲೀಸ್ ಠಾಣೆ ವ್ಯಾಪ್ತಿಯ 14 ವರ್ಷದ ಬಾಲರಾಜು, 11 ವರ್ಷದ ಗಣೇಶ್ ಮತ್ತು 13 ವರ್ಷದ ದರ್ಶನ್ ಒಂದೇ ಕುಟುಂಬದ ಮಕ್ಕಳಾಗಿದ್ದಾರೆ.

ಜೂ.2ರಂದು ಸಂಜೆ 5.30ರಲ್ಲಿ ವೃಷಭಾವತಿನಗರದ ಶಿವನ ದೇವಾಲಯದ ಮುಂದೆ ಇರುವ ಆಟದ ಮೈದಾನದಲ್ಲಿ ಆಟವಾಡಿಕೊಂಡು ಬರುವುದಾಗಿ ಮನೆಯಿಂದ ಹೋದ ಮಕ್ಕಳು ವಾಪಸ್ಸಾಗಿಲ್ಲ. ಎಲ್ಲ ಕಡೆ ಹುಡುಕಾಡಿದರೂ ಅವರ ಪತ್ತೆಯಾಗಿಲ್ಲ ಎಂದು ಫೋಷಕರು ತಿಳಿಸಿದ್ದಾರೆ.

ಮೂವರಿಗೆ ಕನ್ನಡ ಮಾತನಾಡಲು ಬರುತ್ತದೆ. ಮಕ್ಕಳು ಪತ್ತೆಯಾದಲ್ಲಿ ಕಾಮಾಕ್ಷಿಪಾಳ್ಯ ಫೋಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ.

Facebook Comments