ಮದುವೆಯಾದ ಹತ್ತೇ ದಿನಕ್ಕೆ ನವವಿವಾಹಿತೆ ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೇಗಾಲ,ಜೂ.11-ಮದುವೆಯಾದ ಹತ್ತೇ ದಿನಕ್ಕೆ ನವವಿವಾಹಿತೆ ನಾಪತ್ತೆಯಾಗಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಾಳ್ಯಗ್ರಾಮದ ಆಶಾ(22) ಕಾಣೆಯಾಗಿರುವ ನವವಿವಾಹಿತೆಯಾಗಿದ್ದು, ಈ ಸಂಬಂಧ ಪತಿ ಶಿವರಾಜು ಠಾಣೆಗೆ ದೂರು ನೀಡಿದ್ದಾರೆ.

ಕಳೆದ ಮೇ 30ರಂದು ಕುಣಗಳ್ಳಿ ಗ್ರಾಮದ ಆಶಾಳನ್ನು ಶಿವರಾಜ್ ವಿವಾಹವಾಗಿದ್ದು, ಜೂ.5ರಂದು ಬೀಗರೂಟವೂ ನಡೆದಿತ್ತು. ತದನಂತರ ಸಂಪ್ರದಾಯದಂತೆ ಶಿವರಾಜ್ ಅವರು ಪತ್ನಿ ಆಶಾ ಮನೆಗೆ ಹೋಗಿದ್ದರು.

ಮೊನ್ನ ಬೆಳಗ್ಗೆ 8 ಗಂಟೆಗೆ ಶಿವರಾಜ್ ಅವರು ಕೆಲಸದ ನಿಮಿತ್ತ ಕೊಳ್ಳೆಗಾಲಕ್ಕೆ ಬಂದಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಯಲ್ಲಿ ಆಶಾ ಮೊಬೈಲ್‍ಗೆ ಕರೆ ಮಾಡಿ ಮಾತನಾಡಿದ್ದಾರೆ.

ಈ ನಡುವೆ ಅಂದು ಆಶಾ ಫೋಷಕರು ಸೋಸಲೆಯಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಆಶಾ ಮನೆಯಿಂದ ಕಾಣೆಯಾಗಿದ್ದಾರೆ. ಕೆಲಸ ಮುಗಿಸಿಕೊಂಡು ಶಿವರಾಜ್ ಮನೆಗೆ ಬಂದಾಗ ಪತ್ನಿ ಇಲ್ಲದಿರುವುದನ್ನು ಕಂಡು ಗಾಬರಿಯಾಗಿ ಅಕ್ಕಪಕ್ಕ, ಸಂಬಂಧಿಕರನ್ನು ವಿಚಾರಿಸಿದರೂ ಸುಳಿವು ಸಿಕ್ಕಿಲ್ಲ.

ಈ ಸಂಬಂಧ ಗಾಬರಿಯಾದ ಶಿವರಾಜ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಎಎಸ್‍ಐ ನಂಜುಂಡ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments