ನಾಪತ್ತೆಯಾದವರ ಪತ್ತೆಗೆ ಸಹಕರಿಸಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,- ಜೆಜೆನಗರ ಮತ್ತು ರಾಜಗೋಪಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಐದು ಮಂದಿ ಕಣ್ಮರೆಯಾಗಿದ್ದು, ಇವರ ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ.

ಜೆಜೆನಗರ: ಪಾದರಾಯಪುರ 5ನೇ ಮುಖ್ಯರಸ್ತೆ ನಿವಾಸಿ ಸುಮಯ್ಯ(21) ಎಂಬ ಬಿಕಾಂ ವಿದ್ಯಾರ್ಥಿನಿ ಜುಲೈ 29ರಂದು ಸಂಜೆ 5.45ರಲ್ಲಿ ಹೊರಗೆ ಹೋದವರು ಮನೆಗೆ ಹಿಂದಿರುಗಿಲ್ಲ.

ಇದೇ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ ಪಾದರಾಯನಪುರ 7ನೇ ಕ್ರಾಸ್‍ನಿಂದ ಸೀಮಾ ಭಾನು(30) ಎಂಬುವರು ಜು.28ರಂದು ರಾತ್ರಿ 8.30ರಲ್ಲಿ ಹೊರಗೆಹೋದವರು ಕಣ್ಮರೆಯಾಗಿ ದ್ದಾರೆ.

ರಾಜಗೋಪಾಲನಗರ: ರಜನಿ ಫಾರಂ ರಸ್ತೆ, 2ನೇ ಕ್ರಾಸ್ ನಿವಾಸಿ ಅಮಿತಾ(17) ಎಂಬುವರು ಜು.27ರಂದು ಬೆಳಗ್ಗೆ 10.30ರಲ್ಲಿ ಹೊರಗೆ ಹೋಗಿ ಕಾಣೆಯಾಗಿದ್ದಾರೆ.

ಎಲ್ಲಾ ಕಡೆ ಹುಡುಕಿದರೂ ಪ್ರಯೋಜನವಾಗಿಲ್ಲ. ಇದೇ ವ್ಯಾಪ್ತಿಯ ಲಗ್ಗೆರೆ, 2ನೇ ಹಂತ, ಶಾಂಭವಿನಗರದ ಅನಿತಾ(19) ಎಂಬುವರು ಜು.27ರಂದು ಸಂಜೆ 5 ಗಂಟೆಯಲ್ಲಿ ಹೋಗಿದ್ದು ಕಾಣೆಯಾಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಹೆಗ್ಗನಹಳ್ಳಿಯ ಸಂಜೀವಿನಿ ನಗರದ 2ನೇ ಕ್ರಾಸ್ ನಿವಾಸಿ ರಘು(31) ಎಂಬುವರು ಜೂ.15ರಂದು ರಾತ್ರಿ 9 ಗಂಟೆಯಲ್ಲಿ ಹೊರಗೆ ಹೋದವರು ಹಿಂದಿರುಗದೆ ಕಾಣೆಯಾಗಿದ್ದಾರೆ.

ಇವರುಗಳ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗಾಗಲಿ ಅಥವಾ ಕಂಟ್ರೋಲ್ ರೂಂಗಾಗಲಿ ತಿಳಿಸುವಂತೆ ಮನವಿ ಮಾಡಲಾಗಿದೆ.

Facebook Comments