ಬಾಂಗ್ಲಾ ನಟಿ ಭೀಕರ ಕೊಲೆ, ತಪ್ಪೊಪ್ಪಿಕೊಂಡ ಪತಿ

ಈ ಸುದ್ದಿಯನ್ನು ಶೇರ್ ಮಾಡಿ

ಡಾಕಾ,ಜ.18-ಬಾಂಗ್ಲಾದೇಶಿ ನಟಿ ರೈಮಾ ಇಸ್ಲಾಂ ಶಿಮು ಅವರ ಭೀಕರ ಕೊಲೆಯಲ್ಲಿ ಭಾಗಿಯಾಗಿರುವುದಾಗಿ ಆಕೆಯ ಪತಿ ಶಖಾವತ್ ಅಲಿ ನೊಬೆಲ್ ತಪ್ಪೊಪ್ಪಿಕೊಂಡಿದ್ದಾನೆ.ಕಳೆದ ಸೋಮವಾರ ಢಾಕಾದ ಕಡಮ್ತೋಳಿ ಪ್ರದೇಶದ ಅಲಿಪುರ ಸೇತುವೆ ಬಳಿ ಗೋಣಿಚೀಲದಲ್ಲಿ ರೈಮಾ ಅವರ ಮೃತದೇಹ ಪತ್ತೆಯಾಗಿತ್ತು ನಂತರ ಶಖಾವತ್ ಅಲಿ ನಾಪತ್ತೆಯಾಗಿದ್ದ.

ನಟಿಯ ದೇಹದ ಮೇಲೆ ಹಲವಾರು ಗಾಯದ ಗುರುತುಗಳು ಕಂಡುಬಂದ ನಂತರ ಜನದಲ್ಲಿ ನಾನಾರೀತಿ ಅನುಮಾನ ಶುರುವಾಗಿತ್ತು ತಕ್ಷಣ ಕಂಡು ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು .ಈಗ ಅಲಿಯನ್ನು ವಿಚಾರಣೆ ಒಳಪಡಿಸಲಾಗಿದ್ದು ಕೊಲೆಗೆ ಬಹುಶಃ ಕೌಟುಂಬಿಕ ಕಲಹ ಇರಬಹುದು ಎಂದು ಹೇಳಲಾಗುತ್ತಿದೆ.

ಈ ಪ್ರಕರಣದಲ್ಲಿ ಪ್ರಭಾವಿ ನಟ ಭಾಗಿಯಾಗಿರಬಹುದು ಬಾಂಗ್ಲಾದೇಶದ ಮಾಧ್ಯಮಗಳಲ್ಲಿವರದಿ ಮಾಡಿದೆ.ಕೊಲೆ ಹಿಂದೆ ಯಾರು ಇದ್ದಾರೆ ಉದ್ದೇಶದ ಬಗ್ಗೆ ಹಲವಾರು ಅನುಮಾನ ಮೊಡಿದೆ.

Facebook Comments

Sri Raghav

Admin