ಬೆಂಗಳೂರಿನಲ್ಲಿ ಕಾಣೆಯಾಗಿದ್ದ ವಿದ್ಯಾರ್ಥಿನಿ ಮೈಸೂರಿನಲ್ಲಿ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ನ.21- ಕಾಲೇಜಿಗೆ ದಂಡದ ರೂಪದಲ್ಲಿ ಹಣ ಕಟ್ಟಲು ಸಾಧ್ಯವಾಗದೆ ಮನೆ ಬಿಟ್ಟು ನಗರಕ್ಕೆ ಬಂದಿದ್ದ ವಿದ್ಯಾರ್ಥಿನಿಯನ್ನು ಲಷ್ಕರ್ ಠಾಣೆ ಪೋಲೀಸರು ರಕ್ಷಿಸಿದ್ದಾರೆ.
18 ವರ್ಷದ ಯುವತಿಯೊಬ್ಬಳು ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ಕುಳಿ ತಿರುವುದನ್ನು ಗಮನಿಸಿದ ಮಹಿಳಾ ಕಾನ್ಸ್‍ಟೆಬಲ್ ಆಕೆಯನ್ನು ವಿಚಾರಿಸಿದ್ದಾರೆ.

ಆಗ ಆಕೆ ಬೆಂಗಳೂರಿನ ಕಮ್ಮನಹಳ್ಳಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ಹಾಜರಾತಿ ಕೊರತೆಯಿಂದ ದಂಡ ಪಾವತಿಸಬೇಕೆಂದು ಕಾಲೇಜಿನವರು ತಿಳಿಸಿದ್ದರು. ಇದರಿಂದ ಹೆದರಿ ಪೋಷಕರಿಗೆ ತಿಳಿಸದೆ ಮೈಸೂರಿಗೆ ಬಂದಿರುವುದಾಗಿ ಹೇಳಿದ್ದಾರೆ. ನಂತರ ಪೊಲೀಸರು ಆಕೆಯನ್ನು ಠಾಣೆಗೆ ಕರೆತಂದು ಬುದ್ಧಿಮಾತು ಹೇಳಿ ಮನೆಯವರಿಗೆ ಕರೆ ಮಾಡಿ ತಿಳಿಸಿ ಪೋಷಕರಿಗೆ ಒಪ್ಪಿಸಿದ್ದಾರೆ.

Facebook Comments