ದೇಶಿ ಮೂಲದ ಮಿತ್ರೋನ್ ಆ್ಯಪ್ 2.5 ಕೋಟಿ ಡೌನ್‍ಲೋಡ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.8- ದೇಶಿ ಮೂಲದ ಶಾರ್ಟ್‍ಫಾರ್ಮ್ ವೀಡಿಯೊ ಆ್ಯಪ್ ಮಿತ್ರೋನ್ 2.5 ಕೋಟಿಗೂ ಹೆಚ್ಚಿನ ಡೌನ್‍ಡೋಡ್‍ಅನ್ನು ಗೂಗಲ್ ಪ್ಲೇ ಸ್ಟೋರ್‍ನಲ್ಲಿ ದಾಖಲಿಸಿದೆ. ಈ ಆ್ಯಪ್ ಬಳಸಿ ಪ್ಲಾಟ್‍ಫಾರಂನಲ್ಲಿ ಸೇರಲು ಕಂಟೆಂಟ್ ಕ್ರಿಯೆಟರ್ಸ್ ತುಂಬಾ ಆತುರದಲ್ಲಿದ್ದಾರೆ. ಈ ಆ್ಯಪ್ ಅತ್ಯಧಿಕ ವೀವರ್ಶಿಪ್‍ಅನ್ನು ದಾಖಲಿಸಿದ್ದು, ಪ್ರತಿ ಗಂಟೆಗೆ 4 ಕೋಟಿಗೂ ಹೆಚ್ಚಿನ ವೀವರ್ಶಿಪ್ ಹೊಂದಿದೆ.

ಈ ಆ್ಯಪ್‍ಅನ್ನು ಏಪ್ರಿಲ್‍ನಲ್ಲಿ ಪ್ರಾರಂಭಿಸಲಾಯಿತು. ಇಷ್ಟು ಕಡಿಮೆ ಸಮಯದಲ್ಲಿಯೇ ಖ್ಯಾತಿ ಗಳಿಸಿದೆ ಎಂದು ಮಿತ್ರೋನ್ ಆ್ಯಪ್ ಸಹ ಸಂಸ್ಥಾಪಕ ಶಿವಾಂಕ್ ಅಗರ್ವಾಲ್ ಮತ್ತು ಅನಿಶ್ ಖಂಡೇಲ್ವಾಲ್ ಹೇಳಿದರು.

ಜನರು ತಮ್ಮ ನವೀನತೆ ಪ್ರದರ್ಶಿಸಲು ಡಿಜಿಟಲ್ ನಿಶ್ಚಿತಾರ್ಥ ಮತ್ತು ಮನರಂಜನೆಯನ್ನು ಮರು ರೂಪಿಸುವ ಕಿರು ರೂಪದ ವಿಡಿಯೋ ಅಪ್ಲಿಕೇಷನ್ ರಚಿಸುವುದು ಸಹ ಸಂಸ್ಥಾಪಕರ ಉದ್ದೇಶವಾಗಿತ್ತು.

ಲಾಕ್‍ಡೌನ್ ಹಂತದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಗಳಿಗೆ ಸೀಮಿತವಾಗಿರುವುದರಿಂದ ಜನರು ಪೋಸ್ಟ್ ಮಾಡಿದ ಸಣ್ಣ ವಿಡಿಯೋಗಳ ಮೂಲಕ ಡಿಜಿಟಲ್ ಮನರಂಜನೆ ನೀಡುವ ವೇದಿಕೆ ಒದಗಿಸುವುದು ಅಥವಾ ತಮ್ಮದೇ ಆದ ವಿಡಿಯೋಗಳನ್ನು ರಚಿಸುವುದು ನಮ್ಮ ಉದ್ದೇಶವಾಗಿದೆ ಎಂದು ಮಿತ್ರೋನ್ ಸ್ಥಾಪಕ ಮತ್ತು ಸಿಇಒ ಶಿವಾಂಕ್ ಅಗರ್ವಾಲ್ ಹೇಳಿದರು.
ಮಿತ್ರೋನ್ ಡೆವಲಪರ್‍ಗಳಿಗೆ, ಡೇಟಾ ಗೌಪ್ಯತೆಯನ್ನು ಖಾತ್ರಿಪಡಿಸುವುದು ಆದ್ಯತೆಯಾಗಿದೆ.

Facebook Comments